ಮೊದಲ ಟೆಸ್ಟ್'ನಲ್ಲಿ ಭುವಿ 8 ವಿಕೆಟ್ ಕಬಳಿಸಿ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರೆ, ಧವನ್ ಎರಡನೇ ಇನಿಂಗ್ಸ್'ನಲ್ಲಿ 94 ರನ್ ಬಾರಿಸಿ ಗಮನ ಸೆಳೆದಿದ್ದರು.

ನವದೆಹಲಿ(ನ.21): ಇದೇ ನ.24 ರಿಂದ 28ರ ವರೆಗೆ ನಾಗ್ಪುರದಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ ಭಾರತದ ಸ್ಟಾರ್ ಆಟಗಾರರು ಕಣಕ್ಕಿಳಿಯುತ್ತಿಲ್ಲ.

Add Asianetnews Kannada as a Preferred SourcegooglePreferred

ಹೌದು, ಆರಂಭಿಕ ಬ್ಯಾಟ್ಸ್'ಮನ್ ಶಿಖರ್ ಧವನ್ ಮತ್ತು ವೇಗಿ ಭುವನೇಶ್ವರ್ ಕುಮಾರ್ ಅಲಭ್ಯರಾಗಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಈ ಇಬ್ಬರೂ ಆಟಗಾರರು ಲಂಕಾ ವಿರುದ್ಧದ ಟೆಸ್ಟ್‌'ನಲ್ಲಿ ಆಡುತ್ತಿಲ್ಲ. ಭುವನೇಶ್ವರ್ ಕುಮಾರ್ ಮುಂದಿನ 2 ಟೆಸ್ಟ್ ಪಂದ್ಯಗಳಿಗೂ ಅಲಭ್ಯವಾದರೆ, ಧವನ್ ಅಂತಿಮ ಟೆಸ್ಟ್'ಗೆ ಲಭ್ಯವಿರಲಿದ್ದಾರೆ.

ಭುವಿ ಬದಲಿಗೆ ತಮಿಳುನಾಡಿನ ಆಲ್ರೌಂಡರ್ ವಿಜಯ್ ಶಂಕರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಿಜಯ್ ಶಂಕರ್ ಇದೇ ಮೊದಲ ಬಾರಿ ರಾಷ್ಟ್ರೀಯ ಟೆಸ್ಟ್ ತಂಡದಲ್ಲಿ ಅವಕಾಶ ನೀಡಲಾಗಿದ್ದು, ಅಂತಿಮ 11ರ ಬಳಗದಲ್ಲಿನ ಸ್ಥಾನ ಖಚಿತವಾಗಿಲ್ಲ.

ಮೊದಲ ಟೆಸ್ಟ್'ನಲ್ಲಿ ಭುವಿ 8 ವಿಕೆಟ್ ಕಬಳಿಸಿ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರೆ, ಧವನ್ ಎರಡನೇ ಇನಿಂಗ್ಸ್'ನಲ್ಲಿ 94 ರನ್ ಬಾರಿಸಿ ಗಮನ ಸೆಳೆದಿದ್ದರು.