ಇನ್ನು ಮೂರನೇ ಪಂದ್ಯವು ಅಕ್ಟೋಬರ್ 29ರಂದು ಕಾನ್ಪುರದಲ್ಲಿ ನಡೆಯಲಿದ್ದು ಸರಣಿ ಗೆಲುವಿಗಾಗಿ ಉಭಯ ತಂಡಗಳು ಕಾದಾಡಲಿವೆ.

ಪುಣೆ(ಅ.25): ಭುವನೇಶ್ವರ್ ಕುಮಾರ್ ಮಾರಕ ದಾಳಿ ಹಾಗೂ ಧವನ್ ಮತ್ತು ದಿನೇಶ್ ಕಾರ್ತಿಕ್ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಭರ್ಜರಿ ಜಯಭೇರಿ ಬಾರಿಸಿದೆ. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-1 ಅಂತರದ ಸಮಬಲ ಸಾಧಿಸಿದೆ.

ನ್ಯೂಜಿಲೆಂಡ್ ನೀಡಿದ್ದ 231 ರನ್'ಗಳ ಗುರಿಯನ್ನು ಭಾರತ ಕೇವಲ 4 ವಿಕೆಟ್ ಕಳೆದುಕೊಂಡ ಜಯದ ನಗೆ ಬೀರಿದೆ. ಟೀಂ ಇಂಡಿಯಾ ಪರ ಶಿಖರ್ ಧವನ್ 68 ಹಾಗೂ ದಿನೇಶ್ ಕಾರ್ತಿಕ್ ಅಜೇಯ 64 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಈ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ನ್ಯೂಜಿಲೆಂಡ್'ಗೆ ವೇಗಿ ಭುವನೇಶ್ವರ್ ಕುಮಾರ್(45/3) ಮಾರಕವಾಗಿ ಪರಿಣಮಿಸಿದರು. ನ್ಯೂಜಿಲೆಂಡ್ ಪರ ಹೆನ್ರಿ ನಿಕೋಲಸ್(42) ಹಾಗೂ ಕಾಲಿನ್ ಡಿ ಗ್ರಾಂಡ್'ಹೋಂ(41) ಹೊರತು ಪಡಿಸಿದಂತೆ ಬೇರೆ ಯಾವ ಬ್ಯಾಟ್ಸ್'ಮನ್'ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರಲಿಲ್ಲ.

ಭುವನೇಶ್ವರ್ ಕುಮಾರ್ 3 ವಿಕೆಟ್ ಪಡೆದರೆ, ಚಾಹಲ್ ಹಾಗೂ ಬುಮ್ರಾ ತಲಾ 2 ವಿಕೆಟ್ ಪಡೆದರು. ಇನ್ನು ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಹಂಚಿಕೊಂಡರು.

ಇನ್ನು ಮೂರನೇ ಪಂದ್ಯವು ಅಕ್ಟೋಬರ್ 29ರಂದು ಕಾನ್ಪುರದಲ್ಲಿ ನಡೆಯಲಿದ್ದು ಸರಣಿ ಗೆಲುವಿಗಾಗಿ ಉಭಯ ತಂಡಗಳು ಕಾದಾಡಲಿವೆ.

ಸಂಕ್ಷಿಪ್ತ ಸ್ಕೋರ್:

ನ್ಯೂಜಿಲೆಂಡ್: 230/9(50 ಓ)

ಹೆನ್ರಿ ನಿಕೋಲಸ್ :42

ಕಾಲಿನ್ ಡಿ ಗ್ರಾಂಡ್'ಹೋಂ :41

ಭುವನೇಶ್ವರ್ ಕುಮಾರ್ : 45/3

ಭಾರತ: 232/4(46 ಓ)

ಶಿಖರ್ ಧವನ್ : 68

ದಿನೇಶ್ ಕಾರ್ತಿಕ್ : 64*

ಆ್ಯಡಂ ಮಿಲ್ನೆ: 21/1