ಟೀಂ ಇಂಡಿಯಾ ವೇಗಿ ಇಸ್ ಇನ್ ಲವ್. ಹೌದು, ಕೊಹ್ಲಿ ಟೀಂನಲ್ಲಿದ್ದ ಎಲಿಜಿಬಲ್ ಬ್ಯಾಚುಲರ್ ಭುವನೇಶ್ವರ್ ಈಗ ಎಂಗೇಜ್ ಆಗಿದ್ದಾರೆ. 5 ತಿಂಗಳ ಹಿಂದೆ ತನ್ನ ಲವ್ ಸೀಕ್ರೇಟ್ ಅನ್ನ ಬಿಚ್ಚಿಡುತ್ತೇನೆ ಎಂದು ಮಾತು ಕೊಟ್ಟಿದ್ದ ಭುವಿ ಕೊನೆಗೂ ತನ್ನ ಮನದರಸಿಯ ಮುಖವನ್ನ ರಿವೀಲ್ ಮಾಡಿದ್ದಾರೆ. ಇದರೊಂದಿಗೆ ತಮ್ಮ ಕೋಟ್ಯಾಂತರ ಫೀಮೇಲ್ ಫ್ಯಾನ್ಸ್ ಹಾರ್ಟ್'ನ್ನು ಬ್ರೇಕ್ ಮಾಡಿದ್ದಾರೆ.
ಟೀಂ ಇಂಡಿಯಾದ ಯಂಗ್ ಆಂಡ್ ಸ್ಮಾರ್ಟಸ್ಟ್ ಹುಡುಗ, ವೇಗದ ಬೌಲರ್ ಭುವನೇಶ್ವರ್ ಕುಮಾರ್ ಲವ್ನಲ್ಲಿ ಬಿದ್ದಿದ್ದಾರೆ. ಐ ಆಮ್ ಇನ್ ಲವ್ ಅಂತ ಪ್ರಪಂಚಕ್ಕೆ ಕೂಗಿಕೂಗಿ ಹೇಳ್ತಿದ್ದಾರೆ. ಇದರೊಂದಿಗೆ ತಮ್ಮ ಕೋಟ್ಯಂತರ ಫಿಮೇಲ್ ಫ್ಯಾನ್ಸ್ರ ಹಾರ್ಟ್ ಬ್ರೇಕ್ ಮಾಡಿದ್ದಾರೆ. ಇನ್ಮುಂದೆ ನಾನು ನಿಮ್ಮ ರೂಮ್'ನ ಗೋಡೆ ಮೇಲೆ ಇರೋದಿಲ್ಲ ಎಂದು ಸಾರಿ ಹೇಳಿದ್ದಾರೆ.
5 ತಿಂಗಳ ಸಿಕ್ರೇಟ್ ಕೊನೆಗೂ ರಿವೀಲ್: ಕುತೂಹಲಕ್ಕೆ ತೆರೆ ಎಳೆದ ಭುವಿ..!
ನಿಮಗೆ ನೆನಪಿರಬಹುದು, 5 ತಿಂಗಳ ಹಿಂದೆ ಅಂದ್ರೆ ಮೇ 11ರಂದು IPL ಮುಗಿತ್ತಿದ್ದ ಹಾಗೆ ಭುವಿ ತಮ್ಮ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ನೀಡಿದ್ರು. ಭುವಿ ತನ್ನ ಪ್ರೇಯಸಿ ಜೊತೆಗಿರುವ ಫೋಟೋವೊಂದನ್ನ ಅರ್ಧ ಕತ್ತರಿಸಿ ಅದನ್ನ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಇನ್ನರ್ಧ ಭಾಗ ಸದ್ಯದಲ್ಲೇ ರಿಲೀಸ್ ಮಾಡ್ತಿನಿ ಅಂತ ಅಭಿಮಾನಿಗಳ ತಲೆಯಲ್ಲಿ ಹುಳಬಿಟ್ಟಿದ್ರು.
ಆ ಫೋಟೋವನ್ನ ನೋಡಿದ ಅವರ ಅಭಿಮಾನಿಗಳು ಮತ್ತು ಮಾಧ್ಯಮದವರು ಟಾಲಿವುಡ್ ನಟಿ ಅನುಸ್ಮ್ರುತಿ ಸರ್ಕಾರ್ ಅಂತಲೇ ತಿಳಿದುಕೊಂಡಿದ್ರು. ಆದ್ರೆ ಭುವಿ ಮಾತ್ರ ಗುಪ್ಚುಪ್. ಆದ್ರೆ ಅವರ ಮನದರಸಿ ಬಗ್ಗೆ ಉಹಾಪೋಹಗಳಿಗೆ ಮಾತ್ರ ಕೊರತೆನೇ ಇರಲಿಲ್ಲ. ಆದ್ರೆ ಈಗ ಬರೊಬ್ಬರಿ 5 ತಿಂಗಳ ನಂತ್ರ ಭುವಿ ಆ ಅರ್ಧಭಾಗದ ಫೋಟೋವನ್ನ ರಿವೀಲ್ ಮಾಡಿದ್ದಾರೆ.
ಅಂದು ಭುವಿ ಜೊತೆಗಿದ್ದ ಆ ಸುಂದರಿ ಯಾರು ಗೊತ್ತಾ..?
ಸದ್ಯ ಭುವನೇಶ್ವರ್ ರಿವೀಲ್ ಮಾಡಿರುವ ಪೂರ್ತಿ ಫೋಟೋದಲ್ಲಿರುವ ಆ ಕನ್ಯೆ ನುಪುರ್ ನಗರ್ ಅಂತ. ಈಕೆ ಭುವಿಯ ಬಾಲ್ಯದ ಗೆಳತಿ. ಸದ್ಯ ಲವ್ನಲ್ಲಿ ಬಿದ್ದಿರುವ ಇವರು ಬಹಿರಂಗವಾಗಿ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಈಗ ಸ್ವತಃ ಭುವಿಯೇ ತನ್ನ ಲವ್ ಕಹಾನಿಯನ್ನ ಬಿಚ್ಚಿಟ್ಟಿದ್ದು ಮುಂದಿನ ದಿನಗಳಲ್ಲಿ ಟೀಂ ಇಂಡಿಯಾದ ಕ್ಯಾಂಪ್ಗಳಲ್ಲಿ ಇವಳನ್ನ ಕಂಡ್ರೂ ಅಚ್ಚರಿ ಇಲ್ಲ.
Here’s the better half of the picture @nupurnagar 😊😍
Ad4A post shared by Bhuvneshwar Kumar (@imbhuvi) on
ಭುವಿ ಯಶಸ್ಸಿನ ಹಿಂದೆ ನುಪುರ್ ನಗರ್..!: ಭುವಿ ಅದ್ಭುತ ಆಟದ ಹಿಂದೆ ನುಪುರ್..!
ಭುವಿ ಮತ್ತು ನುಪುರ್ ಸ್ನೇಹ, ಪ್ರೇಮವಾಗಿ ಮರಿವರ್ತನೆಯಾದ ನಂತರ ಭುವಿಯ ಲಕ್ ಕೂಡ ಪರವರ್ತನೆಯಾಗಿದ್ಯಂತೆ. ತಂಡದಲ್ಲಿ ಅವಕಾಶಗಳಿಲ್ಲದೆ ಪರದಾಡುತ್ತಿದ್ದ ಭುವಿಗೆ ಅವಕಾಶಗಳ ಮೇಲೆ ಅವಕಾಶ ಸಿಕ್ಕಿತ್ತಂತೆ. ಅಷ್ಟೇ ಅಲ್ಲ ಲಂಕಾ ಮತ್ತು ಅಶ್ಟ್ರೇಲಿಯಾ ವಿರುದ್ಧದ ಸರಣಿಗಳಲ್ಲೂ ಅದ್ಭುತ ಪ್ರದರ್ಶನ ತೋರಲು ಸಾದ್ಯವಾಯಿತ್ತಂತೆ. ಅದರ ಖುಷಿಯಲ್ಲೇ ಭುವಿ ತನ್ನ ಭಾವಿ ಪತ್ನಿಯನ್ನ ವಿಶ್ವಕ್ಕೆ ಪರಿಚಯಿಸಿದ್ದು.
ಒಟ್ಟಿನಲ್ಲಿ ಮತ್ತೊಬ್ಬ ಟೀಂ ಇಂಡಿಯಾ ಬ್ಯಾಚುಲರ್ ಹುಡುಗ ಹಳ್ಳಕ್ಕೆ ಬಿದ್ದಾಯ್ತು. ತನ್ನ ಮುಂದಿನ ಲವ್ ಜೀವನ ಸುಖಕರವಾಗಿರಲಿ. ಆದ್ರೆ ಇದರ ನಡುವೆ ತಮ್ಮ ಬೌಲಿಂಗ್ ಅನ್ನ ಮರೆಯದೆ ಟೀಂ ಇಂಡಿಯಾ ಪರ ಮತ್ತಷ್ಟು ಅಬ್ಬರಿಸಲಿ ಎಂಬುದಷ್ಟೇ ನಮ್ಮ ಆಶಯ.
