Asianet Suvarna News Asianet Suvarna News

ಡೇವಿಸ್ ಕಪ್ ಆಟಗಾರರಿಗೆ ಭೂಪತಿ ಎಚ್ಚರಿಕೆ

ಆನಂದ್ ಅಮೃತ್ ರಾಜ್ ನಾಯಕತ್ವ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಳಿಕ ಮಹೇಶ್ ಭೂಪತಿ ಡೇವಿಸ್ ಕಪ್ ತಂಡದ ಆಟವಾಡದ ನಾಯಕನಾಗಿ ಆಯ್ಕೆಯಾಗಿದ್ದಾರೆ.

Bhupathi asks players to undergo fitness tests before Uzbek clash
  • Facebook
  • Twitter
  • Whatsapp

ದುಬೈ(ಮಾ.02): ಇದೇ ಏಪ್ರಿಲ್ 7ರಿಂದ 9ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಉಜ್ಬೇಕಿಸ್ತಾನ ವಿರುದ್ಧದ ಡೇವಿಸ್‌ ಕಪ್ ಟೆನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಮುಂಚೆ ಭಾರತದ ಪ್ರತಿಯೊಬ್ಬ ಆಟಗಾರರೂ ದೈಹಿಕ ಕ್ಷಮತೆ ಪರೀಕ್ಷೆಗೆ ಗುರಿಯಾಗುವುದು ಕಡ್ಡಾಯ ಎಂದು ಭಾರತ ಡೇವಿಸ್ ಕಪ್ ತಂಡದ ಆಟವಾಡದ ನಾಯಕ ಮಹೇಶ್ ಭೂಪತಿ ಎಚ್ಚರಿಸಿದ್ದಾರೆ.

‘‘ಕ್ರೀಡಾಪಟುಗಳಿಗೆ ದೈಹಿಕ ಕ್ಷಮತೆ ಎಂಬುದು ನಂ.1 ಆದ್ಯತೆಯಾಗಬೇಕು. ಟೆನಿಸಿಗರೇನೂ ಇದರಿಂದ ಹೊರತಲ್ಲ. ಐದು ಸೆಟ್‌ಗಳ ಆಟವಾಡುವುದು ಸುಲಭದ ಮಾತಲ್ಲ. ದೈಹಿಕ ಕ್ಷಮತೆ ಇಲ್ಲದೆ ಹೋದರೆ, ಅದಕ್ಕೆ ನಾವು ಭಾರೀ ಬೆಲೆ ತೆರಬೇಕಾಗುತ್ತದೆ. ಇದನ್ನು ನಮ್ಮ ಆಟಗಾರರು ಗಂಭೀರವಾಗಿ ಪರಿಗಣಿಸಬೇಕು’’ ಎಂದು 42ರ ಹರೆಯದ ಭೂಪತಿ ಪುನರುಚ್ಚರಿಸಿದ್ದಾರೆ.

ತವರಿನಲ್ಲಿ ತನ್ನ ತಂಡವನ್ನು ಮುನ್ನೆಡೆಸುವ ಬಗ್ಗೆ ಪ್ರತಿಕ್ರಿಯಿಸಿರುವ ಭೂಪತಿ, ನಮ್ಮ ತಂಡದ ಬಹುತೇಕ ಎಲ್ಲಾ ಆಟಗಾರರು ನನ್ನೊಟ್ಟಿಗೆ ಇಲ್ಲವೇ ವಿರುದ್ಧವಾಗಿ ಆಡಿದವರೇ ಆಗಿದ್ದಾರೆ. ಇದೊಂದು ನನ್ನ ಪಾಲಿಗೆ ಹೊಸ ಸವಾಲು ಎಂದಿದ್ದಾರೆ."

ಆನಂದ್ ಅಮೃತ್ ರಾಜ್ ನಾಯಕತ್ವ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಳಿಕ ಮಹೇಶ್ ಭೂಪತಿ ಡೇವಿಸ್ ಕಪ್ ತಂಡದ ಆಟವಾಡದ ನಾಯಕನಾಗಿ ಆಯ್ಕೆಯಾಗಿದ್ದಾರೆ.

Follow Us:
Download App:
  • android
  • ios