ದಿವಿಜ್ ಶರಣ್‌'ಗೆ ಈ ವರ್ಷದಲ್ಲಿ ಇದು 2ನೇ ಚಾಲೆಂಜರ್ ಟೂರ್ನಿಯಾಗಿದೆ.
ತಾಷ್ಕೆಂಟ್(ಅ.13): ಭಾರತದ ಯೂಕಿ ಭಾಂಬ್ರಿ ಮತ್ತು ದಿವಿಜ್ ಶರಣ್ ಜೋಡಿ, ತಾಷ್ಕೆಂಟ್ ಎಟಿಪಿ ಚಾಲೆಂಜರ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ಫೈನಲ್'ನಲ್ಲಿ ಸೊಲುಂಡು ರನ್ನರ್ ಅಪ್ಗೆ ತೃಪ್ತಿಪಟ್ಟಿದ್ದಾರೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ಯೂಕಿ ಮತ್ತು ದಿವಿಜ್ ಜೋಡಿ 4-6, 2-6 ನೇರ ಸೆಟ್'ಗಳಿಂದ ಚಿಲಿಯ ಹಾನ್ಸ್ ಪೊಡ್ಲಿಪ್ನಿಕ್ ಕಾಸ್ಟಿಲೋ ಮತ್ತು ಬೇಲಾರಸ್ನ ಆ್ಯಂಡ್ರೆ ವಸಿಲೆವ್ಸಿಕಿ ಜೋಡಿ ಎದುರು ಪರಾಭವ ಹೊಂದಿದರು.
ದಿವಿಜ್ ಶರಣ್'ಗೆ ಈ ವರ್ಷದಲ್ಲಿ ಇದು 2ನೇ ಚಾಲೆಂಜರ್ ಟೂರ್ನಿಯಾಗಿದೆ. ಈ ಹಿಂದೆ ಶರಣ್ ಮತ್ತು ಪೂರವ್ ರಾಜ ಜೋಡಿ ಬೊರ್ಡೆಕ್ಸ್ನಲ್ಲಿ ಪ್ರಶಸ್ತಿ ಜಯಿಸಿತ್ತು. 2017ರಲ್ಲಿ ಯೂಕಿಗೆ ಇದು ಮೊದಲ ಡಬಲ್ಸ್ ಫೈನಲ್ ಪಂದ್ಯವಾಗಿದೆ.
