ಬರಲಿದೆ ಐಪಿಎಲ್‌ ರೀತಿ ಭಾರತೀಯ ಬಾಕ್ಸಿಂಗ್‌ ಲೀಗ್‌!

ಪ್ರತಿ ತಂಡದಲ್ಲಿ 14 ಬಾಕ್ಸರ್‌ಗಳು ಇರಲಿದ್ದಾರೆ. ಒಟ್ಟು 7 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಪುರುಷರ ವಿಭಾಗದಲ್ಲಿ 5 (52 ಕೆ.ಜಿ, 57 ಕೆ.ಜಿ, 69 ಕೆ.ಜಿ, 75 ಕೆ.ಜಿ ಮತ್ತು 91 ಕೆ.ಜಿ), ಮಹಿಳಾ ವಿಭಾಗದಲ್ಲಿ 2 (51 ಕೆ.ಜಿ, 60 ಕೆ.ಜಿ) ಸ್ಪರ್ಧೆ ನಡೆಯಲಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ..

BFI set to launch inaugural three week boxing league

ನವದೆಹಲಿ[ಮೇ.01]: ಐಪಿಎಲ್‌, ಪ್ರೊ ಕಬಡ್ಡಿ ಮಾದರಿ ಬಾಕ್ಸಿಂಗ್‌ ಲೀಗ್‌ಗೆ ಈ ವರ್ಷ ಚಾಲನೆ ಸಿಗಲಿದೆ. ಭಾರತೀಯ ಬಾಕ್ಸಿಂಗ್‌ ಲೀಗ್‌ನ ಉದ್ಘಾಟನಾ ಆವೃತ್ತಿ ಜುಲೈ, ಆಗಸ್ಟ್‌ನಲ್ಲಿ ನಡೆಯಲಿದೆ ಎಂದು ಭಾರತೀಯ ಬಾಕ್ಸಿಂಗ್‌ ಫೆಡರೇಷನ್‌ (ಬಿಎಫ್‌ಐ) ಮಂಗಳವಾರ ಘೋಷಿಸಿದೆ. ಟೂರ್ನಿ 3 ವಾರಗಳ ಕಾಲ ನಡೆಯಲಿದ್ದು, ಒಟ್ಟು 6 ನಗರಗಳ ತಂಡಗಳು ಪಾಲ್ಗೊಳ್ಳಲಿವೆ.

ಈಗಾಗಲೇ ಹಲವು ಭಾರತೀಯ ಬಾಕ್ಸರ್‌ಗಳು ಟೂರ್ನಿಗೆ ನೋಂದಣಿ ಮಾಡಿಕೊಂಡಿದ್ದು, ವಿದೇಶಿ ಬಾಕ್ಸರ್‌ಗಳು ಸಹ ಸೇರಿಕೊಳ್ಳಲಿದ್ದಾರೆ. ಪ್ರತಿ ತಂಡದಲ್ಲಿ 14 ಬಾಕ್ಸರ್‌ಗಳು ಇರಲಿದ್ದಾರೆ. ಒಟ್ಟು 7 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಪುರುಷರ ವಿಭಾಗದಲ್ಲಿ 5 (52 ಕೆ.ಜಿ, 57 ಕೆ.ಜಿ, 69 ಕೆ.ಜಿ, 75 ಕೆ.ಜಿ ಮತ್ತು 91 ಕೆ.ಜಿ), ಮಹಿಳಾ ವಿಭಾಗದಲ್ಲಿ 2 (51 ಕೆ.ಜಿ, 60 ಕೆ.ಜಿ) ಸ್ಪರ್ಧೆ ನಡೆಯಲಿದೆ.

14 ಬಾಕ್ಸರ್‌ಗಳ ಪೈಕಿ 8 ಭಾರತೀಯರು ಇರಲಿದ್ದಾರೆ. ಒಬ್ಬ ವೃತ್ತಿಪರ ಬಾಕ್ಸರ್‌ಗೂ ತಂಡದಲ್ಲಿ ಅವಕಾಶವಿರಲಿದೆ. ‘ಕಿರಿಯರ ವಿಭಾಗದ ಒಬ್ಬ ಬಾಕ್ಸರ್‌ನನ್ನು ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ, ಆದರೆ ಆತ ಸ್ಪರ್ಧಿಸುವುದಿಲ್ಲ. ಯುವಕರಿಗೆ ಅನುಭವ ಸಿಗಲಿದೆ ಎನ್ನುವ ಉದ್ದೇಶದಿಂದ ಅವಕಾಶ ಕಲ್ಪಿಸಲಾಗುತ್ತದೆ’ ಎಂದು ಬಿಎಫ್‌ಐ ಅಧಿಕಾರಿ ಹೇಳಿದ್ದಾರೆ.

3 ನಗರಗಳಲ್ಲಿ ಪಂದ್ಯಗಳು: ಉದ್ಘಾಟನಾ ಆವೃತ್ತಿಯ ಪಂದ್ಯಗಳು ದೆಹಲಿ, ಗುವಾಹಟಿ ಮತ್ತು ಪುಣೆಯಲ್ಲಿ ನಡೆಯಲಿವೆ. ಸ್ಟಾರ್‌ ಸ್ಪೋಟ್ಸ್‌ರ್‍ ಪ್ರಸಾರ ಹಕ್ಕು ಪಡೆದಿದ್ದು, ಪಂದ್ಯಗಳು ನೇರ ಪ್ರಸಾರಗೊಳ್ಳಲಿವೆ. ಸದ್ಯದಲ್ಲೇ ಬಾಕ್ಸರ್‌ಗಳ ಹರಾಜು ನಡೆಯಲಿದೆ. ತಂಡಗಳ ಹೆಸರು, ಮಾಲೀಕರ ವಿವರಗಳನ್ನು ಶೀಘ್ರದಲ್ಲಿ ಪ್ರಕಟಿಸುವುದಾಗಿ ಬಿಎಫ್‌ಐ ತಿಳಿಸಿದೆ.

Latest Videos
Follow Us:
Download App:
  • android
  • ios