ಆರಂಭದಲ್ಲೇ ಪ್ರವಾಸಿ ತಂಡ ಮುನ್ನಡೆ ಪಡೆದುಕೊಂಡಿತು.  ಮೊದಲಾರ್ಧದಲ್ಲಿ  1-1ರಿಂದ ಉಭಯ ತಂಡಗಳು ಸಮಬಲ ಸಾಧಿಸಿದ್ದವು.

ಬೆಂಗಳೂರು(ಅ.19): ಏಷ್ಯನ್ ಫುಟ್ಬಾಲ್ ಫೆಡರೇಷನ್ ಕಪ್‌ ಟೂರ್ನಿಯ ಫೈನಲ್​ಗೆ ಪ್ರವೇಶ ಪಡೆಯುವ ಮೂಲಕ ಬೆಂಗಳೂರು ಎಫ್​ಸಿ ಐತಿಹಾಸಿಕ ಸಾಧನೆ ಮಾಡಿದೆ. ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 2ನೇ ಹಂತದ ಸೆಮಿಫೈನಲ್ ಪಂದ್ಯದಲ್ಲಿ ಬಿಎಫ್​ಸಿ 3-1 ಗೋಲ್​ನಿಂದ ಜೋಹರ್ ದಾರುಲ್ ತಾಜಿಮ್ ತಂಡದ ವಿರುದ್ಧ ಭರ್ಜರಿ ಜಯ ದಾಖಲಿಸಿತು. ಆರಂಭದಲ್ಲೇ ಪ್ರವಾಸಿ ತಂಡ ಮುನ್ನಡೆ ಪಡೆದುಕೊಂಡಿತು. ಮೊದಲಾರ್ಧದಲ್ಲಿ 1-1ರಿಂದ ಉಭಯ ತಂಡಗಳು ಸಮಬಲ ಸಾಧಿಸಿದ್ದವು. ಬಿಎಫ್​ಸಿ ಪರ 41 ಮತ್ತು 66ನೇ ನಿಮಿಷದಲ್ಲಿ ನಾಯಕ ಸುನಿಲ್​ ಛೆಟ್ರಿ ಗೋಲ್​ ದಾಖಲಿಸಿ ಮುನ್ನಡೆ ತಂದುಕೊಟ್ಟರು. 75ನೇ ನಿಮಿಷದಲ್ಲಿ ಜುವಾನ್​ ಗೋಲ್​ ಹೊಡೆಯುವ ಮೂಲಕ ಬಿಎಫ್​​ಸಿ 3-1ರಿಂದ ಭರ್ಜರಿ ಜಯ ಸಾಧಿಸಿತು. ಎರಡು ಸೆಮಿಸ್​ನಿಂದ ಸರಾಸರಿ 4-2 ಗೋಲ್​ಗಳ ಅಂತರದ ಗೆಲುವಿನಿಂದ ಬಿಎಫ್​ಸಿ ಫೈನಲ್​ ತಲುಪಿತು. ಬಿಎಫ್​ಸಿ ನವೆಂಬರ್​ 5ರಂದು ಫೈನಲ್​ ಪಂದ್ಯ ಆಡಲಿದೆ..