ಅಭ್ಯಾಸಕ್ಕಾಗಿ ಸ್ಪೇನ್’ಗೆ ತೆರಳಿದ ಬಿಎಫ್’ಸಿ

BFC camp to be held in Spain
Highlights

ಆ.22 ಹಾಗೂ ಆ.29ಕ್ಕೆ ಟರ್ಕಿಮೆನಿಸ್ತಾನದ ಅಲ್ಟಿನ್ ಅಸ್ಯರ್ ಎಫ್‌ಸಿ ವಿರುದ್ಧ ಬಿಎಫ್‌ಸಿ, ಎಎಫ್‌ಸಿ ಕಪ್ ಸೆಮೀಸ್ ಪಂದ್ಯಗಳನ್ನಾಡಲಿದೆ. ಅದಕ್ಕೂ ಮೊದಲು ಬಾರ್ಸಿಲೋನಾ ‘ಬಿ’, ಸೆಗುಂಡಾ
‘ಬಿ’, ಅಟ್ಲೆಟಿಕೋ ಸಗುಂಟಿನೋ, 2015ರ ಎಎಫ್‌ಸಿ ಕಪ್ ರನ್ನರ್-ಅಪ್ ತಂಡ ಶಬಾಬ್ ಅಲ್ ಅಹಿಲ್ ದುಬೈ ಎಫ್‌ಸಿ, ವಿಲ್ಲಾರಿಯಲ್ ಎಫ್‌ಸಿ ತಂಡಗಳನ್ನು ಎದುರಿಸಲಿದೆ.

ಬೆಂಗಳೂರು[ಜು.28]: 2018ರ ಎಎಫ್‌ಸಿ ಕಪ್ ಅಂತರ ವಲಯ ಪ್ಲೇ-ಆಫ್ ಸೆಮಿಫೈನಲ್ಸ್‌ಗೆ ಸಿದ್ಧತೆ ನಡೆಸುವ ಸಲುವಾಗಿ ಬೆಂಗಳೂರು ಫುಟ್ಬಾಲ್ ಕ್ಲಬ್(ಬಿಎಫ್‌ಸಿ) ತಂಡ ಸ್ಪೇನ್‌ಗೆ ತೆರಳಲಿದೆ. ಜು.30ಕ್ಕೆ ತಂಡ ಪ್ರಯಾಣಿಸಲಿದ್ದು, ಋತು ಆರಂಭಕ್ಕೂ ಮೊದಲು ಸ್ಪ್ಯಾನಿಶ್ ಫುಟ್ಬಾಲ್‌ನ ದೈತ್ಯ ತಂಡಗಳಾದ ಬಾರ್ಸಿಲೋನಾ ಹಾಗೂ ವಿಲ್ಲಾರಿಯೆಲ್ ತಂಡಗಳ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲಿದೆ ಎಂದು ಶುಕ್ರವಾರ ಬಿಎಫ್‌ಸಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಆ.22 ಹಾಗೂ ಆ.29ಕ್ಕೆ ಟರ್ಕಿಮೆನಿಸ್ತಾನದ ಅಲ್ಟಿನ್ ಅಸ್ಯರ್ ಎಫ್‌ಸಿ ವಿರುದ್ಧ ಬಿಎಫ್‌ಸಿ, ಎಎಫ್‌ಸಿ ಕಪ್ ಸೆಮೀಸ್ ಪಂದ್ಯಗಳನ್ನಾಡಲಿದೆ. ಅದಕ್ಕೂ ಮೊದಲು ಬಾರ್ಸಿಲೋನಾ ‘ಬಿ’, ಸೆಗುಂಡಾ ‘ಬಿ’, ಅಟ್ಲೆಟಿಕೋ ಸಗುಂಟಿನೋ, 2015ರ ಎಎಫ್‌ಸಿ ಕಪ್ ರನ್ನರ್-ಅಪ್ ತಂಡ ಶಬಾಬ್ ಅಲ್ ಅಹಿಲ್ ದುಬೈ ಎಫ್‌ಸಿ, ವಿಲ್ಲಾರಿಯಲ್ ಎಫ್‌ಸಿ ತಂಡಗಳನ್ನು ಎದುರಿಸಲಿದೆ.

ಜತೆಗೆ ವ್ಯಾಲೆನ್ಸಿಯಾದ ಮಸಿಯಾ ಲಾ ಗ್ರಾವಾ ಕ್ರೀಡಾಂಗಣದಲ್ಲಿ ತಂಡ ಅಭ್ಯಾಸ ನಡೆಸಲಿದೆ. ಆ.15ಕ್ಕೆ ತಂಡ ಬೆಂಗಳೂರಿಗೆ ವಾಪಸಾಗಲಿದ್ದು, ಆ.22ಕ್ಕೆ ಅಂತರ ವಲಯ ಪ್ಲೇ-ಆಫ್ ಸೆಮೀಸ್‌ನ
ಮೊದಲ ಚರಣದ ಪಂದ್ಯವನ್ನು ಕಂಠೀರವ ಕ್ರೀಡಾಂಗಣದಲ್ಲಿ ಆಡಲಿದೆ. ಬಳಿಕ ಆ.22ರ ಪಂದ್ಯಕ್ಕೆ ಟರ್ಕಿಮೆನಿಸ್ತಾನಕ್ಕೆ ತೆರಳಲಿದೆ. 

loader