ಐಎಸ್ಎಲ್ 2018: ಡ್ರಾಗೆ ತೃಪ್ತಿಪಟ್ಟ ಸುನಿಲ್ ಚೆಟ್ರಿ ನಾಯಕತ್ವ ಬೆಂಗಳೂರು ಎಫ್‌ಸಿ
ಐಎಸ್ಎಲ್ ಟೂರ್ನಿಯ 9ನೇ ಲೀಗ್ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಹಾಗೂ ಜೆಮ್ಶೆಡ್‌ಪುರ ಎಫ್‌ಸಿ ತಂಡ ಹೋರಾಟ ನಡೆಸಿತ್ತು. ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.
ಬೆಂಗಳೂರು(ಅ.07): ಕಿಕ್ಕಿರಿದು ತುಂಬಿದ ಬೆಂಗಳೂರಿನ ಕಂಠೀರವ ಕ್ರೀಡಾಂಗಣ ಅದ್ಬುತ ಪಂದ್ಯಕ್ಕೆ ಸಾಕ್ಷಿಯಾಯ್ತು. ಭಾನುವಾರ(ಅ.07) ನಡೆದ ಇಂಡಿಯನ್ ಸೂಪರ್ ಲೀಗ್ ನ ಬೆಂಗಳೂರು ಎಫ್‌ಸಿ ಹಾಗೂ ಜೆಮ್ಶೆಡ್‌ಪುರ್ ಎಫ್‌ಸಿ ನಡುವವಿನ ಪಂದ್ಯ ರೋಚಕ ಪಂದ್ಯ 2-2 ಗೋಲುಗಳಿಂದ ಡ್ರಾ ದಲ್ಲಿ ಕೊನೆಗೊಂಡಿತು.
ನಿಶು ಕುಮಾರ್ (45) ಹಾಗೂ ಸುನಿಲ್ ಛೆಟ್ರಿ (88) ಬೆಂಗಳೂರು ಎಫ್ ಸಿ ಪರ ಗೋಲು ಗಳಿಸಿದರೆ. ಜೆಮ್ಷೆಡ್ಪುರ ಪರ ಗೌರವ್ ಮುಖಿ (81) ಹಾಗೂ ಸರ್ಗಿಯೋ ಸಿಡಾನಛ್ 90+4) ಗೋಲು ಗಾಳಿಸುವುದರೊಂದಿಗೆ ಪಂದ್ಯ 2-2 ಗೋಲಿನಿಂದ ಡ್ರಾಗೊಂಡಿತು.
ಗೌರವ್ ಮುಖಿ ದಾಖಲೆ 81ನೇ ನಿಮಿಷದಲ್ಲಿ ಗೌರವ್ ಮುಖಿ ಗಳಿಸಿದ ಗೋಲಿನಿಂದ ಜೆಮ್ಷೆಡ್ಪುರ ತಂಡ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. 16 ವರ್ಷ ವಯಸ್ಸಿನ ಗೌರವ್ ಮುಖಿ ಇಂಡಿಯನ್ ಸೂಪರ್ ಲೀಗ್ ನಲ್ಲಿ ಗೋಲು ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಐಎಸ್‌ಎಲ್‌ಗೆ ಕಾಹಿಲ್ ಗೌರವ:
ನಾಲ್ಕು ಬಾರಿ ಫಿಫಾ ವಿಶ್ವಕಪ್ ಆಡಿರುವ ಆಸ್ಟ್ರೇಲಿಯಾದ ಟಿಮ್ ಕಾಹಿಲ್ ಇಂಡಿಯನ್ ಸೂಪರ್ ಲೀಗ್‌ಗೆ ಕಾಲಿಟ್ಟರು. 2006, 2010, 2014 ಹಾಗೂ 2018ರ ಫಿಫಾ ವಿಶ್ವಕಪ್ ಆಡಿರುವ ಕಾಹಿಲ್, ಆಸ್ಟ್ರೇಲಿಯಾದ ಪರ 107 ಪಂದ್ಯಗಳನ್ನಾಡಿ 50 ಗೋಲು ಗಳಿಸಿದ್ದಾರೆ. 2004ರ ಒಲಿಂಪಿಕ್ಸ್‌ನಲ್ಲೂ ಕಾಹಿಲ್ ಆಡಿದ್ದಾರೆ. 38 ವರ್ಷದ ಕಾಹಿಲ್ ಕಂಠೀರವ ಅಂಗಣದಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.