ಎಎಫ್‌‍ಸಿ ಕಪ್‌ನಿಂದ ಹೊರಬಿದ್ದ ಬೆಂಗಳೂರು ತಂಡ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 30, Aug 2018, 10:14 AM IST
Bengaluru FC crashed out of the 2018 AFC CUP
Highlights

ಪ್ರತಿಷ್ಠಿತ ಎಎಫ್‌ಸಿ ಕಪ್ ಟೂರ್ನಿಯಿಂದ ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು ಫುಟ್ಬಾಲ್ ತಂಡ ಹೊರಬಿದ್ದಿದೆ. ಸೆಮಿಫೈನಲ್ ಫೈನಲ್ ಹೋರಾಟದಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ ನಿರಾಸೆ ಅನುಭಲಿಸಿತು.

ಆ್ಯಶ್ಗ್‌ಬಾಟ್(ಆ.30): ಇಲ್ಲಿನ ಕೊಪೆಟ್‌ಡಗ್ ಕ್ರೀಡಾಂಗಣದಲ್ಲಿ ನಡೆದ ಎಎಫ್‌ಸಿ ಕಪ್ ಅಂತರ ವಲಯ ಸೆಮಿಫೈನಲ್‌ನಲ್ಲಿ ಆಲ್ಟ್ಯನ್ ಅಸ್ಯಾರ್ ಎಫ್‌ಕೆ ತಂಡದ ವಿರುದ್ಧ ಸೋಲುಂಡ ಬಿಎಫ್‌ಸಿ ಏಷ್ಯನ್ ಸ್ಪರ್ಧೆಯಿಂದ ಹೊರಬಿದ್ದಿದೆ. 

 

 

ಬುಧವಾರ ನಡೆದ ಪಂದ್ಯದಲ್ಲಿ ಆಲ್ಟ್ಯನ್ ಅಸ್ಯಾರ್ 2-0 ಗೋಲಿನಿಂದ ಬಿಎಫ್‌ಸಿ ತಂಡವನ್ನು ಮಣಿಸಿತು. ಮೊದಲಾರ್ಧದಲ್ಲಿ ಎರಡೂ ತಂಡಗಳು ಯಾವುದೇ ಗೋಲುಗಳಿಸಿರಲಿಲ್ಲ. ದ್ವಿತೀಯಾರ್ಧದ ಆಟದ 8 ನಿಮಿಷಗಳ ಅಂತರದಲ್ಲಿ ಆಲ್ಟ್ಯನ್ ತಂಡ 2 ಗೋಲು ದಾಖಲಿಸಿತು. 

 

 

ಆಲ್ಟಿಮೈರಟ್ (50ನೇ ನಿ.) ಮತ್ತು ವಯಾತ್ (58ನೇ ನಿ.) ಗೋಲುಗಳಿಸಿದರು. ಬಿಎಫ್‌ಸಿ ಪರ ಯಾರೊಬ್ಬ ಆಟಗಾರರು ಗೋಲುಗಳಿಸಲಿಲ್ಲ. ಈ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ 5-2 ಅಂತರರಿಂದ ಜಯಗಳಿಸಬೇಕಿತ್ತು.
 

loader