ಸತತ 4 ಸೋಲುಗಳಿಂದ ಕಂಗೆಟ್ಟಿದ್ದ ಬೆಂಗಳೂರು ಬುಲ್ಸ್ ತಂಡವು ಗೆಲುವಿನ ಹಳಿಗೆ ಮರಳುವಲ್ಲಿ ಯಶಸ್ವಿಯಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಅಹಮದಾಬಾದ್: ಜೈ ಭಗವಾನ್ ಅತ್ಯಮೋಘ ಪ್ರದರ್ಶನದ ನೆರವಿನಿಂದ 11ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್ ಮೊದಲು ಗೆಲುವು ದಾಖಲಿಸಿದೆ. ಸತತ 4 ಪಂದ್ಯಗಳಲ್ಲಿ ಸೋತಿದ್ದ ಬೆಂಗಳೂರು, ಮಂಗಳವಾರ ದಬಾಂಗ್ ಡೆಲ್ಲಿ ವಿರುದ್ಧ ಬು34-33 ಅಂಕಗಳಿಂದ ರೋಚಕವಾಗಿ ಜಯಗಳಿಸಿತು.
ಮೊದಲಾರ್ಧದಲ್ಲಿ 14-22 ಅಂಕಗಳಿಂದ ಹಿನ್ನಡೆ ಅನುಭವಿಸಿದ್ದ ಬುಲ್ಸ್, ಕೊನೆ 10 ನಿಮಿಷದಲ್ಲಿ 13 ಅಂಕ ಗಳಿಸಿ ಪಂದ್ಯ ತನ್ನದಾಗಿಸಿಕೊಂಡಿತು. ಭಗವಾನ್ 11 ರೈಡ್ ಅಂಕ ಗಳಿಸಿ ಗೆಲುವಿನ ರೂವಾರಿಯಾದರು. ಡೆಲ್ಲಿ ಪರ ಆಶು ಮಲಿಕ್ 13 ಅಂಕ ಪಡೆದರು.
ಗೆಲುವನ್ನು ಪುನೀತ್ ರಾಜ್‌ಕುಮಾರ್‌ಗೆ ಅರ್ಪಿಸಿದ ಗೂಳಿಗಳು: ಸ್ಯಾಂಡಲ್‌ವುಡ್‌ನ ದೃವತಾರೆ, ನಮ್ಮೆಲ್ಲರ ಪ್ರೀತಿಯ ಪುನೀತ್ ರಾಜ್‌ಕುಮಾರ್ ನಮ್ಮೆಲ್ಲರನ್ನು ಅಗಲಿ ಅಕ್ಟೋಬರ್ 29ಕ್ಕೆ ಮೂರು ವರ್ಷಗಳು ತುಂಬಿವೆ. ಬಾಲನಟನೆಯಲ್ಲೇ ರಾಷ್ಟ್ರೀಯ ಪ್ರಶಸ್ತಿ ಜಯಿಸಿದ್ದ ಪ್ರೀತಿಯ ಅಪ್ಪುವಿಗೆ ಬೆಂಗಳೂರು ಬುಲ್ಸ್ ಜತೆಗೆ ಅವಿನಾಭಾವ ಸಂಬಂಧವಿತ್ತು.
4ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಪುನೀತ್ ರಾಜ್‌ಕುಮಾರ್, ಬೆಂಗಳೂರು ಬುಲ್ಸ್ ತಂಡದ ರಾಯಬಾರಿಯಾಗಿ ಗಮನ ಸೆಳೆದಿದ್ದರು. ಇದೀಗ ಸತತ 4 ಸೋಲುಗಳ ಬಳಿಕ ಗೆಲುವಿನ ಖಾತೆ ತೆರೆದ ಬೆಂಗಳೂರು ಬುಲ್ಸ್ ತಂಡವು, ಈ ಗೆಲುವನ್ನು ನಮ್ಮ ಪ್ರೀತಿಯ ಪುನೀತ್ ರಾಜ್‌ಕುಮಾರ್‌ಗೆ ಅರ್ಪಿಸಿದೆ.
ಸ್ಮೃತಿ ಮಂಧನಾ ಸೆಂಚುರಿ: ಕಿವೀಸ್ ಮಹಿಳೆಯರ ವಿರುದ್ಧ ಏಕದಿನ ಸರಣಿ ಗೆದ್ದ ಭಾರತ
ದಿನದ ಮತ್ತೊಂದು ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಹಾಗೂ ಪುಣೇರಿ ಪಲ್ಟನ್ 32-32 ಅಂಕಗಳಿಂದ ಟೈ ಸಾಧಿಸಿದವು. ಬೆಂಗಾಲ್ ಪರ ಕರ್ನಾಟಕದ ಸುಶೀಲ್ 10 ಅಂಕ ಗಳಿಸಿದರೆ, ಪುಣೇರಿ ಪರ ಆಕಾಶ್ ಶಿಂಧೆ, ಪಂಕಜ್ ಮೋಹಿತ್ ತಲಾ 8 ಅಂಕ ಸಂಪಾದಿಸಿದರು.
ಇಂದಿನ ಪಂದ್ಯಗಳು
ಗುಜರಾತ್-ತಲೈವಾಸ್, ರಾತ್ರಿ 8ಕ್ಕೆ
ಹರ್ಯಾಣ-ಯೋಧಾಸ್, ರಾತ್ರಿ 9ಕ್ಕೆ
