ಪಾಕ್ ತಂಡದ ಕ್ಯಾಪ್ಟನ್ ಆಗಿದ್ದು ನನಗೆ ಸಿಕ್ಕ ಅತಿದೊಡ್ಡ ಗೌರವ: ಮೊಹಮ್ಮದ್ ರಿಜ್ವಾನ್

ಪಾಕಿಸ್ತಾನ ಸೀಮಿತ ಓವರ್‌ಗಳ ಕ್ರಿಕೆಟ್‌ ತಂಡದ ನೂತನ ನಾಯಕ ಮೊಹಮ್ಮದ್ ರಿಜ್ವಾನ್, ನಾಯಕರಾದ ಬಳಿಕ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ. 

Mohammad Rizwan calls it great honour to be captain of Pakistan Limited over Team kvn

ಕರಾಚಿ: ಪಾಕಿಸ್ತಾನ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕರಾಗಿ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ನೇಮಕವಾಗಿದ್ದಾರೆ. ಬಾಬರ್ ಅಜಂ ಅವರಿಂದ ತೆರವಾದ ಸ್ಥಾನವನ್ನು ಇದೀಗ ರಿಜ್ವಾನ್ ತುಂಬಲಿದ್ದಾರೆ. ಮುಂಬರುವ ಆಸ್ಟ್ರೇಲಿಯಾ ಎದುರಿನ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿಯಲ್ಲಿ ರಿಜ್ವಾನ್ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕರಾಗಿ ಕಾರ್ಯನಿರ್ವಹಿಸಲು ಸಜ್ಜಾಗಿದ್ದಾರೆ.

ಅಕ್ಟೋಬರ್ 27ರಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ವಿಶೇಷ ಪತ್ರಿಕಾಗೋಷ್ಟಿ ಕರೆದು, "ಪಾಕಿಸ್ತಾನ ಏಕದಿನ ಹಾಗೂ ಟಿ20 ತಂಡದ ನೂತನ ನಾಯಕರನ್ನಾಗಿ ಮೊಹಮ್ಮದ್ ರಿಜ್ವಾನ್ ಅವರನ್ನು ಆಯ್ಕೆ ಮಾಡಲಾಗಿದೆ" ಎಂದು ಘೋಷಿಸಿತ್ತು. ಭಾನುವಾರ ಲಾಹೋರ್‌ನಲ್ಲಿ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಮಹತ್ವದ ಘೋಷಣೆ ಮಾಡಿದ್ದರು. ಇನ್ನು ಇದೇ ವೇಳೆ ಅನುಭವಿ ಆಲ್ರೌಂಡರ್ ಸಲ್ಮಾನ್ ಅಲಿ ಆಘಾ ಅವರನ್ನು ಉಪನಾಯಕರನ್ನಾಗಿ ನೇಮಿಸಿರುವುದಾಗಿಯೂ ಪಿಸಿಬಿ ಘೋಷಿಸಿದೆ. 

ಡೇಂಜರ್‌ ಝೋನ್‌ನಲ್ಲಿ ರೋಹಿತ್ ಶರ್ಮಾ ಕ್ಯಾಪ್ಟನ್ಸಿ; ಮುಂಬೈ ಟೆಸ್ಟ್ ಗೆಲ್ಲುವ ಒತ್ತಡದಲ್ಲಿ ಹಿಟ್‌ಮ್ಯಾನ್

ಈ ಕುರಿತಂತೆ ಮಾತನಾಡಿರುವ ರಿಜ್ವಾನ್, "ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಬೇಕು ಎನ್ನುವುದು ಪಾಕ್‌ನಲ್ಲಿ ಹುಟ್ಟಿದ ಪ್ರತಿಯೊಬ್ಬ ಕ್ರಿಕೆಟಿಗನ ಕನಸಾಗಿರುತ್ತದೆ. ಅದೇ ದೊಡ್ಡ ಗೌರವ. ಇನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕರಾಗಿದ್ದು, ನನ್ನ ಪಾಲಿನ ಅತಿದೊಡ್ಡ ಗೌರವವೇ ಸರಿ.  ನಿಮಗೆಷ್ಟು ಗೌರವ ಸಿಕ್ಕಿದೆ ಎನ್ನುವುದನ್ನು ವರ್ಣಿಸಲು ಸಾಧ್ಯವಾಗುತ್ತಿಲ್ಲ. ನಾನು ಇದನ್ನು ಎರಡು ರೀತಿಯಲ್ಲಿ ವಿವರಿಸಲು ಬಯಸುತ್ತೇನೆ. ಮೊದಲನೆಯದ್ದು, ನನಗೆ ಈ ಹಿಂದಿನ ನಾಯಕರು ನನ್ನನ್ನು ಬೆಂಬಲಿಸಿದ ರೀತಿ, ನಾನು ಅದೇ ರೀತಿ ಇರಲು ಬಯಸುತ್ತೇನೆ. ಅದೇ ರೀತಿ ಎರಡನೇಯದ್ದಾಗಿ 24-25 ಕೋಟಿ ನಮ್ಮ ಮೇಲೆ ವಿಶ್ವಾಸ ಇಟ್ಟಿರುವುದನ್ನು ಉಳಿಸಿಕೊಳ್ಳಲು ಬಯಸುತ್ತೇನೆ. ಇದು ಒಂದು ರೀತಿ ನನಗೆ ಚಾಲೆಂಜ್. ಒಂದು ಕಡೆ ಗೌರವ ಮತ್ತೊಂದು ಕಡೆಯಿಂದ ಸವಾಲು. ನಾನು ಈ ಎರಡನ್ನೂ ಬ್ಯಾಲೆನ್ಸ್ ಮಾಡಲು ಪ್ರಯತ್ನಿಸುತ್ತೇನೆ" ಎಂದು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಗೆ ಟೀಂ ಇಂಡಿಯಾ ಹೆಡ್‌ ಕೋಚ್ ಗೌತಮ್ ಗಂಭೀರ್ ಅಲ್ಲ!

ಪಾಕಿಸ್ತಾನ ತಂಡದ ನೂತನ ನಾಯಕ ಮೊಹಮ್ಮದ್ ರಿಜ್ವಾನ್‌ಗೆ ಮೊದಲ ಪ್ರಯತ್ನದಲ್ಲೇ ಅಗ್ನಿಪರೀಕ್ಷೆ ಎದುರಾಗಲಿದೆ. ಪಾಕಿಸ್ತಾನ ತಂಡವು ಸೀಮಿತ ಓವರ್‌ಗಳ ಸರಣಿಯನ್ನಾಡಲು ಆಸೀಸ್ ಪ್ರವಾಸ ಕೈಗೊಳ್ಳಲಿದೆ. ಮೊಹಮ್ಮದ್ ರಿಜ್ವಾನ್ ನಾಯಕತ್ವದಲ್ಲಿ ಪಾಕಿಸ್ತಾನ ತಂಡವು 3 ಪಂದ್ಯಗಳ ಏಕದಿನ ಸರಣಿ ಹಾಗೂ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ಸೀಮಿತ ಓವರ್‌ಗಳ ಸರಣಿಯು ನವೆಂಬರ್ 04ರಿಂದ ಆರಂಭವಾಗಲಿದೆ.

Latest Videos
Follow Us:
Download App:
  • android
  • ios