ಭಾರತ ಹಾಗೂ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡಗಳ ನಡುವಿನ ಮೂರನೇ ಹಾಗೂ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸುವ ಮೂಲಕ ಸರಣಿ ಕೈವಶ ಮಾಡಿಕೊಂಡದೆ

ಅಹಮದಾಬಾದ್‌: ನ್ಯೂಜಿಲೆಂಡ್‌ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಭಾರತ 6 ವಿಕೆಟ್‌ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ಕೈ ವಶಪಡಿಸಿಕೊಂಡಿದೆ.

ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಕಿವೀಸ್‌ 49.5 ಓವರ್‌ಗಳಲ್ಲಿ 232 ರನ್‌ಗೆ ಆಲೌಟಾಯಿತು. ಬ್ರೂಕ್‌ ಹಾಲಿಡೆ 86, ಜಾರ್ಜಿಯಾ ಪ್ಲಿಮ್ಮರ್‌ 39 ರನ್‌ ಗಳಿಸಿದರು. ಭಾರತದ ಪರ ದೀಪ್ತಿ ಶರ್ಮಾ 3, ಪ್ರಿಯಾ ಮಿಶ್ರಾ 2 ವಿಕೆಟ್‌ ಕಿತ್ತರು.

Scroll to load tweet…

ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಭಾರತ 44.2 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಜಯಗಳಿಸಿತು. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ಏಕದಿನದಲ್ಲಿ 8ನೇ ಶತಕ ಪೂರ್ಣಗೊಳಿಸಿದರು. ಅವರು 100 ರನ್‌ ಗಳಿಸಿ ಔಟಾದರು. ಬಳಿಕ ಹರ್ಮನ್‌ಪ್ರೀತ್‌ ಕೌರ್‌ ಔಟಾಗದೆ 59 ರನ್‌ ಗಳಿಸಿ ತಂಡವನ್ನು ಗೆಲ್ಲಿಸಿದರು.

ರಣಜಿಯಲ್ಲಿ ಕೊನೆಗೂ ಕರ್ನಾಟಕಕ್ಕೆ ಸಿಕ್ತು ಗೆಲುವು: ಬಿಹಾರ ವಿರುದ್ಧ 8 ವಿಕೆಟ್‌ ಜಯಭೇರಿ

ಸ್ಕೋರ್: ನ್ಯೂಜಿಲೆಂಡ್‌ 49.5 ಓವರ್‌ಗಳಲ್ಲಿ 232/10 (ಬ್ರೂಕ್‌ 86, ಜಾರ್ಜಿಯಾ 39, ದೀಪ್ತಿ 3-39), ಭಾರತ 44.2 ಓವರ್‌ಗಳಲ್ಲಿ 236/4 (ಸ್ಮೃತಿ 100, ಹರ್ಮನ್‌ 59*, ಹನ್ನಾ 2-47)

ಪಂದ್ಯಶ್ರೇಷ್ಠ: ಸ್ಮೃತಿ ಮಂಧನಾ, ಸರಣಿ ಶ್ರೇಷ್ಠ: ದೀಪ್ತಿ ಶರ್ಮಾ

ಬೌಲಿಂಗ್‌ ರ್‍ಯಾಂಕಿಂಗ್‌: ಜೀವನಶ್ರೇಷ್ಠ ಎರಡನೇ ಸ್ಥಾನಕ್ಕೆ ದೀಪ್ತಿ ಶರ್ಮಾ

ದುಬೈ: ಭಾರತ ಮಹಿಳಾ ತಂಡದ ತಾರಾ ಆಟಗಾರ್ತಿ ದೀಪ್ತಿ ಶರ್ಮಾ ಐಸಿಸಿ ಮಹಿಳಾ ಏಕದಿನ ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ ಎರಡನೇ ಸ್ಥಾನಕ್ಕೇರಿದ್ದಾರೆ. ಮಂಗಳವಾರ ಪ್ರಕಟಗೊಂಡ ನೂತನ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ದೀಪ್ತಿ ಎರಡು ಸ್ಥಾನ ಪ್ರಗತಿ ಸಾಧಿಸಿದರು. 

ಇಂಗ್ಲೆಂಡ್‌ನ ಸೋಫಿ ಎಕ್ಲೆಸ್ಟೋನ್‌ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಬ್ಯಾಟರ್‌ಗಳ ಪಟ್ಟಿಯಲ್ಲಿ ಜೆಮಿಮಾ ರೋಡ್ರಿಗ್ಸ್‌ 3 ಸ್ಥಾನ ಮೇಲೇರಿ 30ನೇ ಸ್ಥಾನ ಪಡೆದಿದ್ದು, ಸ್ಮೃತಿ ಮಂಧನಾ 4ನೇ ಸ್ಥಾನದಲ್ಲಿದ್ದಾರೆ. ನಾಯಕಿ ಹರ್ಮನ್‌ಪ್ರೀತ್‌ ಕೌರ್‌ 3 ಸ್ಥಾನ ಕುಸಿದು 12ನೇ ಸ್ಥಾನ ತಲುಪಿದ್ದಾರೆ. ಈ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಶೀವರ್‌ ಬ್ರಂಟ್‌ ನಂ.1 ಸ್ಥಾನದಲ್ಲೇ ಮುಂದುವರಿದಿದ್ದಾರೆ.

ರೀಟೈನ್‌ಗೆ ಕ್ಷಣಗಣನೆ ಬೆನ್ನಲ್ಲೇ ಸ್ಪೋಟಕ ಶತಕ ಸಿಡಿಸಿದ ಆರ್‌ಸಿಬಿ ಆಟಗಾರ! ಬೆಂಗಳೂರು ಫ್ರಾಂಚೈಸಿ ಮೇಲೆ ಎಲ್ಲರ ಕಣ್ಣು

4ನೇ ಪಂದ್ಯಕ್ಕೆ ವೈಶಾಖ್‌ ಬದಲು ಯಶೋವರ್ಧನ್‌

ಬೆಂಗಳೂರು: ನ.6ರಿಂದ ನಡೆಯಲಿರುವ 2024-25ರ ರಣಜಿ ಟ್ರೋಫಿಯ ಬೆಂಗಾಲ್‌ ವಿರುದ್ಧ ಪಂದ್ಯಕ್ಕೆ ಕರ್ನಾಟಕ ತಂಡವನ್ನು ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಪ್ರಕಟಿಸಿದೆ. 16 ಸದಸ್ಯರ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಗಾಗಿ ಭಾರತ ತಂಡಕ್ಕೆ ಆಯ್ಕೆಯಾಗಿರುವ ವಿಜಯ್‌ಕುಮಾರ್‌ ವೈಶಾಖ್ ಬದಲು ಯಶೋವರ್ಧನ್‌ ಪರಂತಪ್‌ರನ್ನು ಕರ್ನಾಟಕ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ.

ತಂಡ: ಮಯಾಂಕ್‌ ಅಗರ್‌ವಾಲ್‌ (ನಾಯಕ), ನಿಕಿನ್‌ ಜೋಸ್‌, ಸ್ಮರಣ್‌ ಆರ್‌., ಮನೀಶ್‌ ಪಾಂಡೆ (ಉಪನಾಯಕ), ಶ್ರೇಯಸ್‌ ಗೋಪಾಲ್‌, ಸುಜಯ್‌ ಸತೇರಿ (ವಿಕೆಟ್‌ ಕೀಪರ್‌), ಹಾರ್ದಿಕ್‌ ರಾಜ್‌, ವಾಸುಕಿ ಕೌಶಿಕ್‌, ವಿದ್ಯಾಧರ್‌ ಪಾಟೀಲ್‌, ಅಭಿನವ್‌ ಮನೋಹರ್‌, ಲುವ್ನಿತ್‌ ಸಿಸೋಡಿಯಾ (ವಿಕೆಟ್‌ ಕೀಪರ್‌), ಕಿಶನ್‌ ಬೆಡಾರೆ, ಅನೀಶ್‌ ಕೆ.ವಿ., ಮೊಹ್ಸಿನ್‌ ಖಾನ್‌, ಅಭಿಲಾಶ್‌ ಶೆಟ್ಟಿ, ಯಶೋವರ್ಧನ್‌.