ಇಲ್ಲಿನ ಸುಭಾಶ್‌'ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯ ರೋಚಕ ಡ್ರಾದಲ್ಲಿ ಮುಕ್ತಾಯಗೊಂಡಿತು.
ಕೋಲ್ಕತಾ(ಸೆ.02): ಮೊದಲ ದಿನ ಗೆಲುವಿನ ನಗೆ ಬೀರಿದ್ದ ಬೆಂಗಾಲ್ ವಾರಿಯರ್ಸ್ ತಂಡಕ್ಕೆ ಎರಡನೇ ದಿನ ಗೆಲುವು ಕೈತಪ್ಪಿತು. ಯು.ಪಿ.ಯೋಧಾ ಹಾಗೂ ಬೆಂಗಾಲ್ ನಡುವಿನ ಪಂದ್ಯ 26-26 ಅಂಕಗಳಿಂದ ರೋಚಕ ಡ್ರಾದಲ್ಲಿ ಆಯಿತು.
ಇಲ್ಲಿನ ಸುಭಾಶ್'ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯ ರೋಚಕ ಡ್ರಾದಲ್ಲಿ ಮುಕ್ತಾಯಗೊಂಡಿತು. ಮೊದಲಾರ್ಧದ ಅಂತ್ಯಕ್ಕೆ ಯು.ಪಿ.ಯೋಧಾ 14-11 ಅಂಕಗಳ ಮುನ್ನಡೆ ಸಾಧಿಸಿತು.
ಆದರೆ, ದ್ವಿತೀಯಾರ್ಧದ ಪಂದ್ಯ ಮುಕ್ತಾಯಗೊಳ್ಳಲು ಎರಡು ನಿಮಿಷ ಬಾಕಿ ಇದ್ದಾಗ ಯೋಧಾ ಆಲೌಟ್ ಆಗುವ ಮೂಲಕ ಬೆಂಗಾಲ್ 25-24 ಅಂಕಗಳ ಮುನ್ನಡೆ ಸಾಧಿಸಿತು. ಈ ವೇಳೆ ನಿತಿನ್ ತೋಮರ್ 2 ಅಂಕಗಳಿಸುವ ಪಂದ್ಯ 26-26ರಲ್ಲಿ ಡ್ರಾ ಆಗುವಂತೆ ನೋಡಿಕೊಂಡರು.
