Asianet Suvarna News Asianet Suvarna News

ಒನ್'ಡೇ ತಂಡದಿಂದ ಬೆನ್ ಸ್ಟೋಕ್ಸ್ ಔಟ್

ಇದೀಗ ಬೆನ್ ಸ್ಟೋಕ್ಸ್ ಡೇವಿಡ್ ಮಲಾನ್ ಇಂಗ್ಲೆಂಡ್ ತಂಡ ಕೂಡಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಜನವರಿ 14ರಿಂದ ಆರಂಭವಾಗಲಿದೆ.

Ben Stokes replaced by Dawid Malan in England one day international squad
  • Facebook
  • Twitter
  • Whatsapp

ಮೆಲ್ಬರ್ನ್(ಜ.01): ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದಲೂ ಇಂಗ್ಲೆಂಡ್‌'ನ ಆಲ್ರೌಂಡರ್ ಬೆನ್ ಸ್ಟೋಕ್ಸ್‌'ರನ್ನು ಕೈಬಿಡಲಾಗಿದೆ.

ಬಾರ್'ವೊಂದರ ಬಳಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಗುರಿಯಾದ ಕಾರಣ, ತಂಡದಿಂದ ಸ್ಟೋಕ್ಸ್‌'ರನ್ನು ತಾತ್ಕಾಲಿಕವಾಗಿ ವಜಾಗೊಳಿಸಲಾಗಿತ್ತು.

ಇದರಿಂದಾಗಿ ಆ್ಯಷಸ್ ಟೆಸ್ಟ್ ಸರಣಿಗೆ ಸ್ಟೋಕ್ಸ್ ಅಲಭ್ಯರಾಗಿದ್ದರು. ಇದಾದ ಬಳಿಕ ಸ್ಟೋಕ್ಸ್ ಮೇಲೆ ವಿಧಿಸಿದ್ದ ನಿಷೇಧವನ್ನು ಹಿಂಪಡೆಯಲಾಗಿತ್ತು. ನಂತರ ನ್ಯೂಜಿಲೆಂಡ್'ಗೆ ತೆರಳಿದ್ದ ಸ್ಟೋಕ್ಸ್ ಅಲ್ಲಿ ಕೆಲ ದಿನ ಅಭ್ಯಾಸ ನಡೆಸಿ ತವರಿಗೆ ಮರಳಿದ್ದರು.

ಇದೀಗ ಬೆನ್ ಸ್ಟೋಕ್ಸ್ ಡೇವಿಡ್ ಮಲಾನ್ ಇಂಗ್ಲೆಂಡ್ ತಂಡ ಕೂಡಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಜನವರಿ 14ರಿಂದ ಆರಂಭವಾಗಲಿದೆ.

Follow Us:
Download App:
  • android
  • ios