Asianet Suvarna News Asianet Suvarna News

ಐಪಿಎಲ್'ನಲ್ಲಿ ಅಪರೂಪದ ದಾಖಲೆ ಬರೆದ ಬೆನ್ ಸ್ಟೋಕ್ಸ್

ತಮ್ಮ ಆಲ್ರೌಂಡ್‌ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆಯುತ್ತಿರುವ ಅವರು ಸದ್ಯ 11 ಪಂದ್ಯಗಳಲ್ಲಿ ಆಡಿದ್ದು, ತಲಾ ಒಂದು ಶತಕ ಹಾಗೂ ಅರ್ಧಶತಕದೊಂದಿಗೆ ಒಟ್ಟು 316 ರನ್‌ ಕಲೆಹಾಕಿದ್ದಾರೆ.

Ben Stokes Creates Another unique records
  • Facebook
  • Twitter
  • Whatsapp

ನವದೆಹಲಿ(ಮೇ.13): ಇಂಡಿಯನ್ ಪ್ರೀಮಿಯರ್ ಲೀಗ್'ನಲ್ಲಿ 14 ಕೋಟಿ ರುಪಾಯಿಗಳಿಗೆ ಬಿಕರಿಯಾಗಿ ಅಚ್ಚರಿ ಮೂಡಿಸಿದ್ದ ಬೆನ್‌ ಸ್ಟೋಕ್ಸ್‌, ಚೊಚ್ಚಲ ಆವೃತ್ತಿಯಲ್ಲೇ ದಾಖಲೆ ಬರೆದಿದ್ದಾರೆ.

ಐಪಿಎಲ್‌'ಗೆ ಪದಾರ್ಪಣೆ ಮಾಡಿದ ಆವೃತ್ತಿಯಲ್ಲೇ 300ಕ್ಕೂ ಹೆಚ್ಚು ರನ್‌, 10ಕ್ಕೂ ಹೆಚ್ಚು ವಿಕೆಟ್‌ ಹಾಗೂ 5 ಅಥವಾ ಅದಕ್ಕಿಂತ ಹೆಚ್ಚು ಕ್ಯಾಚ್‌ ಹಿಡಿದ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ತಮ್ಮ ಆಲ್ರೌಂಡ್‌ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆಯುತ್ತಿರುವ ಅವರು ಸದ್ಯ 11 ಪಂದ್ಯಗಳಲ್ಲಿ ಆಡಿದ್ದು, ತಲಾ ಒಂದು ಶತಕ ಹಾಗೂ ಅರ್ಧಶತಕದೊಂದಿಗೆ ಒಟ್ಟು 316 ರನ್‌ ಕಲೆಹಾಕಿದ್ದಾರೆ.

ಇನ್ನು 25.50 ಸರಾಸರಿಯಲ್ಲಿ 12 ವಿಕೆಟ್‌ ಕಬಳಿಸಿರುವ ಸ್ಟೋಕ್ಸ್‌, 5 ಕ್ಯಾಚ್‌ ಹಿಡಿದಿದ್ದಾರೆ.

Follow Us:
Download App:
  • android
  • ios