ಸ್ಟೋಕ್ಸ್ ಬೀದಿ ಕಾಳಗ ನಡೆಸುತ್ತಿದ್ದ ವಿಡಿಯೋವನ್ನು ಲಂಡನ್‌'ನ ಸ್ಥಳೀಯ ಸುದ್ದಿ ಸಂಸ್ಥೆಯೊಂದು ಬಿಡುಗಡೆ ಮಾಡಿತ್ತು. ಇದರಲ್ಲಿ ಇಬ್ಬರ ಮೇಲೆ ಸ್ಟೋಕ್ಸ್ ಹಲ್ಲೆ ನಡೆಸುತ್ತಿರುವುದು ಪತ್ತೆಯಾಗಿತ್ತು.

ಲಂಡನ್(ಸೆ.29): ಮುಂದಿನ ತಿಂಗಳಿನಿಂದ ಆಸ್ಟ್ರೇಲಿಯಾ ವಿರುದ್ಧ ಆರಂಭವಾಗಲಿರುವ ಪ್ರತಿಷ್ಠಿತ ಆ್ಯಷಸ್ ಸರಣಿಗೂ ಮುನ್ನವೇ ಇಂಗ್ಲೆಂಡ್ ಕ್ರಿಕೆಟ್ ತಂಡದ ಅಭಿಮಾನಿಗಳ ಪಾಲಿಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.

ಹೌದು, ಇಂಗ್ಲೆಂಡ್‌'ನ ಆಲ್ರೌಂಡರ್ ಬೆನ್ ಸ್ಟೋಕ್ಸ್ ಬೀದಿಕಾಳಗದಲ್ಲಿ ತೊಡಗಿರುವ ದೃಶ್ಯಗಳು ಬಹಿರಂಗಗೊಂಡ ಬೆನ್ನಲ್ಲೇ, ಇಂಗ್ಲೆಂಡ್ ರಾಷ್ಟ್ರೀಯ ತಂಡದಿಂದ ಅವರನ್ನು ಕೈ ಬಿಡಲಾಗಿದೆ.

ಸ್ಟೋಕ್ಸ್ ಬೀದಿ ಕಾಳಗ ನಡೆಸುತ್ತಿದ್ದ ವಿಡಿಯೋವನ್ನು ಲಂಡನ್‌'ನ ಸ್ಥಳೀಯ ಸುದ್ದಿ ಸಂಸ್ಥೆಯೊಂದು ಬಿಡುಗಡೆ ಮಾಡಿತ್ತು. ಇದರಲ್ಲಿ ಇಬ್ಬರ ಮೇಲೆ ಸ್ಟೋಕ್ಸ್ ಹಲ್ಲೆ ನಡೆಸುತ್ತಿರುವುದು ಪತ್ತೆಯಾಗಿತ್ತು. ಇನ್ನು ಘಟನೆ ಸಂಬಂಧ ಈಗಾಗಲೇ ಬ್ರಿಸ್ಬೆಲ್ ಪೊಲೀಸರು ಸ್ಟೋಕ್ಸ್'ರನ್ನು ಬಂಧಿಸಿ, ಬಿಡುಗಡೆ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ತನಿಖೆ ಪೂರ್ಣಗೊಳ್ಳುವ ತನಕ ಸ್ಟೋಕ್ಸ್, ಘಟನೆ ವೇಳೆ ಅವರ ಜತೆಗಿದ್ದ ಅಲೆಕ್ಸ್ ಹೇಲ್ಸ್‌'ರನ್ನು ಅಮಾನತು ಮಾಡಲಾಗಿದೆ.