ಭಾನುವಾರ ತಡರಾತ್ರಿ ಬ್ರಿಸ್ಬೆಲ್‌'ನ ನೈಟ್‌'ಕ್ಲಬ್'ವೊಂದರಲ್ಲಿ ಜಗಳ ಮಾಡಿಕೊಂಡಿದ್ದ ಸ್ಟೋಕ್ಸ್, ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಲಂಡನ್(ಅ.01): ಇಂಗ್ಲೆಂಡ್'ನ ಆಲ್ರೌಂಡರ್ ಬೆನ್ ಸ್ಟೋಕ್ಸ್ ಬೀದಿಕಾಳಗ ಪ್ರಕರಣ ದಿನಕ್ಕೊಂದು ರೂಪ ಪಡೆದುಕೊಳ್ಳುತ್ತಿದ್ದು, ಸ್ಟೋಕ್ಸ್ ದಾಳಿ ನಡೆಸಿದ್ದು ಬ್ರಿಟಿಷ್ ಸೇನೆಯ ಮಾಜಿ ಯೋಧರೊಬ್ಬರ ಮೇಲೆ ಎಂದು ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ.
ಸ್ಟೋಕ್ಸ್ ಹಲ್ಲೆ ನಡೆಸುತ್ತಿರುವ ವಿಡಿಯೋ ಬಹಿರಂಗಗೊಂಡ ಬೆನ್ನಲ್ಲೆ, ರಾಷ್ಟ್ರೀಯ ತಂಡದಿಂದ ಅವರನ್ನು ಹಾಗೂ ಜಗಳ ನಡೆದ ವೇಳೆ ಅವರ ಜತೆಗಿದ್ದ ಇಂಗ್ಲೆಂಡ್'ನ ಮತ್ತೋರ್ವ ಆಟಗಾರ ಅಲೆಕ್ಸ್ ಹೇಲ್ಸ್ರನ್ನು ರಾಷ್ಟ್ರೀಯ ತಂಡದಿಂದ ಅಮಾನತುಗೊಳಿಸಲಾಗಿತ್ತು.
ಭಾನುವಾರ ತಡರಾತ್ರಿ ಬ್ರಿಸ್ಬೆಲ್'ನ ನೈಟ್'ಕ್ಲಬ್'ವೊಂದರಲ್ಲಿ ಜಗಳ ಮಾಡಿಕೊಂಡಿದ್ದ ಸ್ಟೋಕ್ಸ್, ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
