ಟೀಂ ಇಂಡಿಯಾ ಕೋಚ್ ಯಾರು ಎನ್ನುವ ಕುತೂಹಲ ಇನ್ನೂ ಹಾಗೆ ಉಳಿದುಕೊಂಡಿದೆ. ಬಿಸಿಸಿಐ ಸಲಹಾ ಸಮತಿ ಸದಸ್ಯರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್ ಸಂದರ್ಶನ ನಡೆಸಿದರು. ಗಂಗೂಲಿ-ಲಕ್ಷ್ಮಣ್ ಖುದ್ದು ಹಾಜರಿದ್ದರೆ, ಲಂಡನ್'ನಲ್ಲಿರುವ ಸಚಿನ್ ಸ್ಕೈಪ್ ಮೂಲಕ ಮಾತುಕತೆ ನಡೆಸಿದರು.
ಮುಂಬೈ(ಜು.11): ಟೀಂ ಇಂಡಿಯಾ ಕೋಚ್ ಯಾರು ಎನ್ನುವ ಕುತೂಹಲ ಇನ್ನೂ ಹಾಗೆ ಉಳಿದುಕೊಂಡಿದೆ. ಬಿಸಿಸಿಐ ಸಲಹಾ ಸಮತಿ ಸದಸ್ಯರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್ ಸಂದರ್ಶನ ನಡೆಸಿದರು. ಗಂಗೂಲಿ-ಲಕ್ಷ್ಮಣ್ ಖುದ್ದು ಹಾಜರಿದ್ದರೆ, ಲಂಡನ್'ನಲ್ಲಿರುವ ಸಚಿನ್ ಸ್ಕೈಪ್ ಮೂಲಕ ಮಾತುಕತೆ ನಡೆಸಿದರು.
ಆದರೆ ಕೋಚ್ ಹೆಸರು ಮಾತ್ರ ಬಹಿರಂಗಪಡಿಸಿಲ್ಲ. ಕಾರಣ ನಾಯಕ ವಿರಾಟ್ ಕೊಹ್ಲಿ, ವಿಂಡೀಸ್ ಟೂರ್ ಮುಗಿಸಿಕೊಂಡು ಭಾರತಕ್ಕೆ ವಾಪಾಸ್ ಬಂದ ನಂತರ ಅವರೊಂದಿಗೆ ಚರ್ಚಿಸಿ ಕೋಚ್ ಹೆಸರನ್ನು ಫೈನಲ್ ಮಾಡಲಾಗುವುದು ಅಂತ ಸೌರವ್ ಗಂಗೂಲಿ ಹೇಳಿದ್ದಾರೆ. ಯಾಕೆಂದರೆ ಎರಡು ವರ್ಷಕ್ಕೆ ಕೋಚ್ ಆಯ್ಕೆ ಮಾಡುವುದು. ಅವರ ಜೊತೆ ಆಡುವುದು ನಾವಲ್ಲ, ನಾಯಕ ಕೊಹ್ಲಿ. ಅವರ ಅಭಿಪ್ರಾಯ ಕೇಳಿ ಮತ್ತೊಮ್ಮೆ ಕೂಲಂಕುಶವಾಗಿ ಚರ್ಚಿಸಿ ಕೋಚ್ ಹೆಸರು ಫೈನಲ್ ಮಾಡಲಾಗುತ್ತದೆ ಅಂತ ದಾದಾ ಹೇಳಿದ್ದಾರೆ.
ಮುಂಬೈನಲ್ಲಿ 10 ಆಕಾಂಕ್ಷಿಗಳಲ್ಲಿ 6 ಮಂದಿಯನ್ನು ಮಾತ್ರ ಸಂದರ್ಶಿಸಲಾಗಿದೆ. ರವಿ ಶಾಸ್ತ್ರಿ, ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ, ರಿಚರ್ಡ್ ಪೈಬಸ್, ಲಾಲ್'ಚಂದ್ ರಜಪೂತ್, ಫಿಲ್ ಸಿಮ್ಮನ್ಸ್ ಅವರನ್ನು ಸಂದರ್ಶಿಸಲಾಯಿತು. ಅದರಲ್ಲಿ ವೀರೇಂದ್ರ ಸೆಹ್ವಾಗ್ ಸಂದರ್ಶನ ಎರಡು ಗಂಟೆಗೂ ಅಧಿಕ ಕಾಲ ನಡೆದಿರುವುದು ವಿಶೇಷ.
