ಐಪಿಎಲ್ ಪಂದ್ಯಗಳ ಆಯೋಜನೆಗೆ ಪ್ರತಿ ರಾಜ್ಯ ಸಂಸ್ಥೆಗಳಿಂದ ಬಿಸಿಸಿಐಗೆ 60 ಲಕ್ಷ ರೂಪಾಯಿ ಮತ್ತು ಫ್ರಾಂಚೈಸಿಗಳಿಂದ 30 ಲಕ್ಷ ರೂಪಾಯಿಗಳ ಅನುದಾನ ದೊರೆಯುತ್ತಿದೆ.

ಮುಂಬೈ(ಮಾ.09): ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಡೆಸದೆ ಹೋದರೆ, ಸರಿಸುಮಾರು 2,500 ಸಾವಿರ ಕೋಟಿಗೂ ಹೆಚ್ಚಿನ ನಷ್ಟವಾಗಿ ಅದು ದಿವಾಳಿಯಾಗಲಿದೆ ಎಂದು ‘ಕ್ರಿಕ್‌ ಬುಜ್’ ವೆಬ್ ಜಾಲ ಹೇಳಿದೆ.

Add Asianetnews Kannada as a Preferred SourcegooglePreferred

ನ್ಯಾ. ಲೋಧಾ ಸಮಿತಿ ಶಿಫಾರಸುಗಳ ಅನುಷ್ಠಾನ ವಿಷಯದಲ್ಲಿ ಸುಪ್ರೀಂ ಕೋರ್ಟ್ ನೇಮಿತ ಆಡಳಿತ ಸಮಿತಿ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಗಳ ನಡುವಿನ ಸಮರ ಇನ್ನೂ ಮುಕ್ತಾಯ ಕಾಣದಂತಾಗಿದ್ದು, ಒಂದೊಮ್ಮೆ ಇದು ವಿಪರೀತಕ್ಕೆ ಹೋದರೆ ಐಪಿಎಲ್ ಮೇಲೆ ಕರಿನೆರಳು ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಸದ್ಯ, ಐಪಿಎಲ್ ಪಂದ್ಯಗಳ ಆಯೋಜನೆಗೆ ಪ್ರತಿ ರಾಜ್ಯ ಸಂಸ್ಥೆಗಳಿಂದ ಬಿಸಿಸಿಐಗೆ 60 ಲಕ್ಷ ರೂಪಾಯಿ ಮತ್ತು ಫ್ರಾಂಚೈಸಿಗಳಿಂದ 30 ಲಕ್ಷ ರೂಪಾಯಿಗಳ ಅನುದಾನ ದೊರೆಯುತ್ತಿದೆ.