2017ರಲ್ಲಿ ದಾರಿಯಲ್ಲೇ ಮುಗಿಯುತ್ತಿತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಕತೆ!

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 25, Jul 2018, 5:09 PM IST
BCCI source reveals the extent of Glenn Maxwell and his escapade in the IPL 2017
Highlights

2017ರ ಐಪಿಎಲ್ ಟೂರ್ನಿ ವೇಳೆ ಆಸ್ಟ್ರೇಲಿಯಾ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕತೆ ಮುಗಿಯುತ್ತಿತ್ತು ಅನ್ನೋ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿದ್ದ ಮ್ಯಾಕ್ಸ್‌ವೆಲ್  ಪಾನಮತ್ತರಾಗಿ ಮಾಡಿದ್ದೇನು? ಸ್ಟಾರ್ ಆಲ್ರೌಂಡರ್ ಕುರಿತು ರೋಚಕ ಮಾಹಿತಿ ಇಲ್ಲಿದೆ.

ಮುಂಬೈ(ಜು.25): ಆಸ್ಟ್ರೇಲಿಯಾ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಸದ್ಯ ಅಲ್ ಜಝೀರಾ ಮಾಡಿರುವ ಮ್ಯಾಚ್ ಫಿಕ್ಸಿಂಗ್ ಆರೋಪದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ, ಇದೀಗ ಮ್ಯಾಕ್ಸ್‌ವೆಲ್ ಕುರಿತ ಸ್ಫೋಟಕ ಮಾಹಿತಿಯನ್ನ ಬಿಸಿಸಿಐ ಮೂಲಗಳು ಬಹಿರಂಗ ಪಡಿಸಿದೆ.

2017ರ ಐಪಿಎಲ್ ಟೂರ್ನಿ ವೇಳೆ ಗ್ಲೆನ್ ಮ್ಯಾಕ್ಸ್‌ವೆಲ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಭಾಗವಾಗಿದ್ದರು. ಟೂರ್ನಿಯ ವೇಳೆ ಗುಜರಾತ್ ಲಯನ್ಸ್ ತಂಡ ರಾತ್ರಿ ಆಯೋಜಿಸಿದ್ದ ಪಾರ್ಟಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಭಾಗವಹಿಸಿದ್ದರು.

ಮ್ಯಾಕ್ಸ್‌ವೆಲ್ ಯಾವುದೇ ಭದ್ರತೆಯನ್ನ ಪಡೆದುಕೊಳ್ಳದೇ, ತಂಡದ ಮ್ಯಾನೇಜರ್‌ಗೂ ಮಾಹಿತಿ ನೀಡದೆ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಪಾರ್ಟಿಯಲ್ಲಿ ಮ್ಯಾಕ್ಸ್‌ವೆಲ್ ಪಾನಮತ್ತರಾಗಿದ್ದಾರೆ. ಬಳಿಕ ಸೈಕಲ್ ಮೂಲಕ ಯಾರೋಬ್ಬರ ಸಹಾಯ ಪಡೆಯದೇ ಪಂಜಾಬ್ ತಂಡ ಉಳಿದುಕೊಂಡಿದ್ದ ಹೊಟೆಲ್‌ಗೆ ವಾಪಾಸ್ಸಾಗಿದ್ದಾರೆ.

ಇದನ್ನು ಓದಿ: ವಿರಾಟ್ ಕೊಹ್ಲಿಯ ಪ್ರತಿ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಕೊಡಬೇಕು 82 ಲಕ್ಷ ರೂಪಾಯಿ!

ಸೈಕಲ್ ಮೂಲಕ ವಾಪಾಸ್ಸಾಗುವ ದಾರಿಯಲ್ಲಿ ಮ್ಯಾಕ್ಸ್‌ವೆಲ್ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ. ಸಾಕಷ್ಟು ವಾಹನ ಓಡಾಡೋ ದಾರಿಯಲ್ಲೇ ಬಿದ್ದ ಮ್ಯಾಕ್ಸ್‌ವೆಲ್ ಹರಸಾಹಸ ಮಾಡಿ ಹೊಟೆಲ್ ತಲುಪಿದ್ದಾರೆ. ಹೈವೇ ರೋಡ್‌ನಲ್ಲಿ ಈ ಘಟನೆ ನಡೆದಿತ್ತು. ಅಂದೇ ಮ್ಯಾಕ್ಸ್‌ವೆಲ್ ಕತೆ ಮುಗಿಯುತಿತ್ತು ಎಂದು ಕ್ರಿಕ್‌ಟ್ರಾಕರ್ ವೆಬ್‌ಸೈಟ್ ಬಿಸಿಸಿಐ  ಮೂಲಗಳ ವರದಿಯನ್ನ ಪ್ರಕಟಿಸಿದೆ.

ಈ ಘಟನೆಯನ್ನ ಬಿಸಿಸಿಐ ಬಹಿರಂಗವಾಗದಂತೆ ನೋಡಿಕೊಂಡಿತ್ತು. ಕಾರಣ ಇದು ಐಪಿಎಲ್ ಟೂರ್ನಿ ಮೇಲೂ ಕೆಟ್ಟ ಪರಿಣಾಮ ಬೀರಲಿದೆ ಅನ್ನೋ ಕಾರಣಕ್ಕೆ ಘಟನೆ ಹೊರಗೆೇ ಬರಲೇ ಇಲ್ಲ ಎಂದು ಬಿಸಿಸಿಐ ಮೂಲಗಳು ಹೇಳಿವೆ.

ಇದನ್ನು ಓದಿ: ಎರಡೂ ಕೈಗಳಲ್ಲಿ ಬೌಲಿಂಗ್-ಅಚ್ಚರಿ ಮೂಡಿಸಿದ ಮೋಕಿತ್ ಹರಿಹರನ್

loader