ಆ.17ರಂದು ಟೂರ್ನಿ ಆರಂಭಗೊಳ್ಳಬೇಕಿತ್ತು. ಆದರೆ ಮಳೆಯಿಂದಾಗಿ ಟೂರ್ನಿ ಆರಂಭಗೊಳ್ಳಲು ಸಾಧ್ಯವಾಗಲಿಲ್ಲ. ಸತತ 4 ಪಂದ್ಯಗಳು ರದ್ದಾದ ಕಾರಣ, ಟೂರ್ನಿಯನ್ನು ಸ್ಥಳಾಂತರಗೊಳಿಸಲು ನಿರ್ಧರಿಸಲಾಯಿತು.

ಬೆಂಗಳೂರು(ಆ.20]: ಭಾರತ ‘ಎ’, ಭಾರತ ‘ಬಿ’, ಆಸ್ಪ್ರೇಲಿಯಾ ‘ಎ’ ಹಾಗೂ ದ.ಆಫ್ರಿಕಾ ‘ಬಿ’ ತಂಡಗಳನ್ನೊಳಗೊಂಡ ಚತುಷ್ಕೋನ ಸರಣಿ, ಮಳೆಯಿಂದಾಗಿ ವಿಜಯವಾಡದಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆ.17ರಂದು ಟೂರ್ನಿ ಆರಂಭಗೊಳ್ಳಬೇಕಿತ್ತು. ಆದರೆ ಮಳೆಯಿಂದಾಗಿ ಟೂರ್ನಿ ಆರಂಭಗೊಳ್ಳಲು ಸಾಧ್ಯವಾಗಲಿಲ್ಲ. ಸತತ 4 ಪಂದ್ಯಗಳು ರದ್ದಾದ ಕಾರಣ, ಟೂರ್ನಿಯನ್ನು ಸ್ಥಳಾಂತರಗೊಳಿಸಲು ನಿರ್ಧರಿಸಲಾಯಿತು.

ಆ.23, 25 ಹಾಗೂ 27ರಂದು ಇನ್ನುಳಿದ ಲೀಗ್‌ ಹಂತದ ಪಂದ್ಯಗಳಿಗೆ ಬೆಂಗಳೂರು ಆತಿಥ್ಯ ನೀಡಲಿದ್ದು, ಆ.29ರಂದು ಫೈನಲ್‌ ಪಂದ್ಯ ನಡೆಯಲಿದೆ. ಕೆಲ ಪಂದ್ಯಗಳು ನೇರ ಪ್ರಸಾರಗೊಳ್ಳಲಿರುವ ಕಾರಣ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಸಾಧ್ಯತೆ ಇದೆ.