ಕಳೆದೆರಡು ವರ್ಷಗಳಲ್ಲಿ ಬಿಸಿಸಿಐ ಕೊಚ್ಚಿ ಟಸ್ಕರ್ಸ್ ತಂಡಕ್ಕೆ ಪರಹಾರವನ್ನೂ ನೀಡಿಲ್ಲ, ಹಾಗೆಯೇ ಐಪಿಎಲ್'ಗೂ ಸೇರಿಸಿಕೊಂಡಿಲ್ಲ.
ನವದೆಹಲಿ(ಅ.25): ನಿಯಮ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿ 2011ರಲ್ಲಿ ಐಪಿಎಲ್ ಪಂದ್ಯಾವಳಿಯಿಂದ ಕೇರಳದ ಕೊಚ್ಚಿ ಟಸ್ಕರ್ಸ್ ತಂಡವನ್ನು ವಜಾಗೊಳಿಸಿದ್ದ ಪ್ರಕರಣ ಇದೀಗ ಅಂತಿಮ ಘಟ್ಟ ತಲುಪಿದ್ದು, ಕೊಚ್ಚಿ ತಂಡದ ಫ್ರಾಂಚೈಸಿಗಳಿಗೆ ₹ 800 ಕೋಟಿಗೂ ಅಧಿಕ ಪರಿಹಾರ ನೀಡಲೇಬೇಕಾದ ಸ್ಥಿತಿಗೆ ಬಿಸಿಸಿಐ ತಲುಪಿದೆ.
ತಂಡವನ್ನು ವಜಾಗೊಳಿಸಿದ್ದನ್ನು ಪ್ರಶ್ನಿಸಿ ಕೊಚ್ಚಿ ತಂಡ ನ್ಯಾಯಾಲಯದ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆ ನಡೆಸಿದ ನಿವೃತ್ತ ನ್ಯಾ. ಲಹೋಟಿ ನೇತೃತ್ವದ
ಸಮಿತಿ, ಕೊಚ್ಚಿ ತಂಡದ ಮಾಲೀಕರಿಗೆ ₹550 ಕೋಟಿ ಪರಿಹಾರ ನೀಡುವಂತೆ ಸೂಚಿಸಿತ್ತು. ಒಂದೊಮ್ಮೆ ಪರಿಹಾರ ನೀಡುವಲ್ಲಿ ವಿಫಲವಾದರೆ ವರ್ಷಕ್ಕೆ ಶೇ.18ರಷ್ಟು ದಂಡ ತೆರಬೇಕೆಂದು ಎಚ್ಚರಿಸಿತ್ತು.
ಕಳೆದೆರಡು ವರ್ಷಗಳಲ್ಲಿ ಬಿಸಿಸಿಐ ಕೊಚ್ಚಿ ಟಸ್ಕರ್ಸ್ ತಂಡಕ್ಕೆ ಪರಹಾರವನ್ನೂ ನೀಡಿಲ್ಲ, ಹಾಗೆಯೇ ಐಪಿಎಲ್'ಗೂ ಸೇರಿಸಿಕೊಂಡಿಲ್ಲ.
