ವೆಂಕಟೇಶ್ ಪ್ರಸಾದ್ ಹುಟ್ಟುಹಬ್ಬಕ್ಕೆ ಪರ್ಫೆಕ್ಟ್ ಗಿಫ್ಟ್ ಕೊಟ್ಟ ಬಿಸಿಸಿಐ

First Published 5, Aug 2018, 5:31 PM IST
Bcci Sent perfect gift to Venkatesh Prasad on his Birthday
Highlights

ಟೀಂ ಇಂಡಿಯಾ ಮಾಜಿ ವೇಗಿ, ಕನ್ನಡಿಗ ವೆಂಕಟೇಶ್ ಪ್ರಸಾದ್‌ ಹುಟ್ಟುಹಬ್ಬಕ್ಕೆ ಬಿಸಿಸಿಐ ಸೂಕ್ತ ಉಡುಗೊರೆ ನೀಡಿದೆ. ಅಷ್ಟಕ್ಕೂ ಭಾರತ ಕಂಡ ಅದ್ಬುತ ವೇಗಿಗೆ ಬಿಸಿಸಿಐ ನೀಡಿದ ಗಿಫ್ಟ್ ಏನು? 

ಮುಂಬೈ(ಆ.04): ಟೀಂ ಇಂಡಿಯಾ ಮಾಜಿ ವೇಗಿ, ಕನ್ನಡಿಗ ವೆಂಕಟೇಶ್ ಪ್ರಸಾದ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 49ನೇ ವಸಂತಕ್ಕೆ ಕಾಲಿಟ್ಟಿರುವ ವೆಂಕಟೇಶ್ ಪ್ರಸಾದ್‌ಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಕ್ರಿಕೆಟಿಗರು ಶುಭಕೋರಿದ್ದಾರೆ. 

ವೆಂಕಟೇಶ್ ಪ್ರಸಾದ್ ಹುಟ್ಟುಹಬ್ಬಕ್ಕೆ ಬಿಸಿಸಿಐ ಅತ್ಯುತ್ತಮ ಉಡುಗೊರೆ ನೀಡಿದೆ. ವೆಂಕಟೇಶ್ ಪ್ರಸಾದ್ ಹಾಗೂ ಅಮೀರ್ ಸೊಹೈಲ್ ನಡುವಿನ ಸ್ಲೆಡ್ಜಿಂಗ್ ವೀಡಿಯೋ ಅಪ್‌ಲೋಡ್ ಮಾಡಿದ ಬಿಸಿಸಿಐ, ಈ ಘಟನೆ ಕ್ರಿಕೆಟ್ ಅಭಿಮಾನಿಗಳಿಂದ ಮನಸ್ಸಿಂದ ಯಾವುತ್ತೂ ಮಾಸಲ್ಲ. ಈ ಸವಿನೆನಪನ್ನ ಮತ್ತೆ ನೆನಪಿಸಿಕೊಳ್ಳಲು ಇದು ಸೂಕ್ತ ಸಮಯ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

 

 

1996ರ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಅಮಿರ್ ಸೊಹೈಲ್, ವೆಂಕಿ ಬೌಲಿಂಗ್‌ನಲ್ಲಿ ಬೌಂಡರಿ ಸಿಡಿಸಿ ಸ್ಲೆಡ್ಜಿಂಗ್ ಆರಂಭಿಸಿದ್ದರು. ಇದೇ ಕಡೆ ಬೌಂಡರಿ ಬಾರಿಸುತ್ತೇನೆ ಎಂದು ವೆಂಕಿ ಕಡೆ ಕೈ ಸನ್ನೆ ಮಾಡಿ ತೋರಿಸಿದ್ದರು. ಮರು ಎಸೆತದಲ್ಲೇ ಅಮಿರ್ ಸೊಹೈಲ್ ವಿಕೆಟ್ ಕಬಳಿಸಿದ ವೆಂಕಟೇಶ್ ಪ್ರಸಾದ್ ತಕ್ಕ ತಿರುಗೇಟು ನೀಡಿದ್ದರು.

ಸ್ಲೋವರ್ ಬಾಲ್ ಎಸೆತದ ನಿಸ್ಸೀಮ ವೆಂಕಟೇಶ್ ಪ್ರಸಾದ್‌ಗೆ ಹುಟ್ಟುಹಬ್ಬದ ಶುಭಾಶಯ ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.  ಈ ಮೂಲಕ ಸಚಿನ್ ತಂಡದ ಸದಸ್ಯನನ್ನ ನೆನಪಿಸಿಕೊಂಡಿದ್ದಾರೆ.

 

 

1994ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ವೆಂಕಿ, ಟೀಂ ಇಂಡಿಯಾದ ಯಶಸ್ವಿ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. 33 ಟೆಸ್ಟ್ ಪಂದ್ಯದಿಂದ 96 ವಿಕೆಟ್ ಕಬಳಿಸಿದ ವೆಂಕಿ, 161 ಏಕದಿನ ಪಂದ್ಯದಿಂದ 196 ವಿಕೆಟ್ ಉರುಳಿಸಿದ್ದಾರೆ. ಟೀಂ ಇಂಡಿಯಾದಲ್ಲಿ ಮಿಂಚಿದ ಕರ್ನಾಟಕ ಹೆಮ್ಮೆಯ ಕ್ರಿಕೆಟಿಗನಿಗೆ ಹ್ಯಾಪಿ ಬರ್ತ್ ಡೇ. 

loader