ಮುಂಬೈ(ಫೆ.26): ಈ ವರ್ಷವೂ ಐಪಿಎಲ್‌ ಪ್ಲೇ-ಆಫ್‌ ವೇಳೆಯೇ ಮಹಿಳಾ ಪ್ರದರ್ಶನ ಟಿ20 ಪಂದ್ಯಗಳನ್ನು ನಡೆಸಲು ಬಿಸಿಸಿಐ ಸಿದ್ಧತೆ ನಡೆಸಿದೆ. ಬಿಸಿಸಿಐ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಪಂದ್ಯಗಳು ಸಂಜೆ 7ಕ್ಕೆ ಆರಂಭಗೊಳ್ಳಲಿವೆ. ಪ್ಲೇ-ಆಫ್‌ ವೇಳೆ ಮಾತ್ರ ಬಿಡುವು ಸಿಗಲಿದ್ದು, ಸಂಜೆ ಸಮಯದಲ್ಲಿ ಪಂದ್ಯ ನಡೆಸಲು ಅನುಕೂಲವಾಗಲಿದೆ ಎನ್ನುವುದು ಬಿಸಿಸಿಐ ನಿಲುವಾಗಿದೆ.

ಇದನ್ನೂ ಓದಿ: ಐಪಿಎಲ್ ಉದ್ಘಾಟನಾ ಸಮಾರಂಭ ರದ್ದು - ಭಾರತೀಯರ ಹೃದಯ ಗೆದ್ದ ಬಿಸಿಸಿಐ!

2 ತಂಡಗಳನ್ನು ರಚಸಿ ಬೆಸ್ಟ್‌ ಆಫ್‌ 3 ಪಂದ್ಯಗಳನ್ನು ನಡೆಸಬೇಕೋ ಇಲ್ಲವೇ 3 ತಂಡಗಳು ರಚಿಸಿ ಲೀಗ್‌ ಹಾಗೂ ಫೈನಲ್‌ ಮಾದರಿಯಲ್ಲಿ ಪಂದ್ಯಗಳನ್ನು ನಡೆಸಬೇಕೋ ಎನ್ನುವುದನ್ನು ಇನ್ನೂ ನಿರ್ಧರಿಸಿಲ್ಲ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ. ಮಹಿಳಾ ಐಪಿಎಲ್ ಟೂರ್ನಿ ನಡೆಸಲು ಆಗ್ರಹ ಕೇಳಿ ಬರುತ್ತಿದೆ. ಕಳೆದ ವರ್ಷ ಮಹಿಳಾ ಐಪಿಎಲ್ ಪ್ರದರ್ಶನ ಪಂದ್ಯ ಯಶಸ್ವಿಯಾಗಿ ನಡೆದಿತ್ತು. 

ಇದನ್ನೂ ಓದಿ: ಐಪಿಎಲ್ 2019ರ ವೇಳಾಪಟ್ಟಿ ಪ್ರಕಟ-ಉದ್ಘಾಟನಾ ಪಂದ್ಯದಲ್ಲಿ RCB -CSK ಫೈಟ್!