ನವದೆಹಲಿ[ಸೆ.10]: ದೇಶದ ಮೂಲೆ-ಮೂಲೆಗೆ ಕ್ರಿಕೆಟ್ ತಲುಪಿಸುವ ಉದ್ದೇಶದಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ[ಬಿಸಿಸಿಐ] ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದು, ಆಲ್ ಇಂಡಿಯಾ ರೇಡಿಯೋ[AIR] ಆಕಾಶವಾಣಿಯೊಂದಿಗೆ 2 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ. 

ಸ್ಮಿತ್ ರ‍್ಯಾಂಕಿಂಗ್‌ನಲ್ಲಿ ಮತ್ತಷ್ಟು ಮುಂದೆ, ಕೊಹ್ಲಿಗೆ 2ನೇ ಸ್ಥಾನವೇ ಫಿಕ್ಸ್..?

ಹೌದು, ಆಕಾಶವಾಣಿಯು ಭಾರತದ ಅಂತಾರಾಷ್ಟ್ರೀಯ ಪಂದ್ಯಗಳು, ರಣಜಿ, ದುಲೀಪ್ ಟ್ರೋಫಿ ಫೈನಲ್ ಸೇರಿದಂತೆ ಆಯ್ದ ದೇಶಿಯ ಪಂದ್ಯಗಳ ವೀಕ್ಷಕ ವಿವರಣೆಯನ್ನು ಬಿತ್ತರಿಸಲಿದೆ. ಇದರಿಂದ ಕೋಟ್ಯಾಂತರ ಮಂದಿ ತಮ್ಮ ನೆಚ್ಚಿನ ಕ್ರಿಕೆಟ್ ಪಂದ್ಯದ ನೇರ ಪ್ರಸಾರದ ವೀಕ್ಷಕ ವಿವರಣೆಯನ್ನು ಆಲಿಸಲಿದ್ದಾರೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

ಕುಂಬ್ಳೆ, ದ್ರಾವಿಡ್‌ಗಿಂತ ಗ್ರೇಟಾ ರವಿ ಶಾಸ್ತ್ರಿ? ಸಂಬಳದಲ್ಲೂ ಅನ್ಯಾಯ!

ಬಿಸಿಸಿಐ ಜತೆಗಿನ ಆಕಾಶವಾಣಿ ಒಪ್ಪಂದ ಸೆಪ್ಟೆಂಬರ್ 10, 2019ರಿಂದ ಆಗಸ್ಟ್ 31, 2021ರವರೆಗೆ ಇರಲಿದೆ. ಹೀಗಾಗಿ ಧರ್ಮಶಾಲಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಪ್ಟೆಂಬರ್ 15ರಿಂದ  ಆರಂಭವಾಗಲಿರುವ ಮೊದಲ ಟಿ20 ಪಂದ್ಯದಿಂದಲೇ ಮೊದಲ ರೇಡಿಯೋ ವೀಕ್ಷಕ ವಿವರಣೆ ಕೇಳಬಹುದಾಗಿದೆ.