2013ರ ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ಎಸ್. ಶ್ರೀಶಾಂತ್ ಸ್ಪಾಟ್-ಪಿಕ್ಸಿಂಗ್ ನಡೆಸಿದ್ದಾರೆ ಎನ್ನುವ ಆರೋಪದಡಿ ಬಿಸಿಸಿಐ ಅವರ ಮೇಲೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಕೊಚ್ಚಿ(ಆ.07): ಸ್ಪಾಟ್-ಪಿಕ್ಸಿಂಗ್ ಆರೋಪದಡಿ ಬಿಸಿಸಿಐ ಎಸ್. ಶ್ರೀಶಾಂತ್'ಗೆ ವಿಧಿಸಿದ್ದ ಜೀವಾವಧಿ ನಿಷೇಧವನ್ನು ಕೇರಳ ಉಚ್ಚ ನ್ಯಾಯಾಲಯ ತೆರವುಗೊಳ.
2015ರಲ್ಲಿ ದೆಹಲಿ ನ್ಯಾಯಾಲಯವು ಶ್ರೀಶಾಂತ್'ರನ್ನು ಆರೋಪ ಮುಕ್ತಗೊಳಿಸಿದ್ದರೂ, ಬಿಸಿಸಿಐ ಮಾತ್ರ ಕೇರಳ ವೇಗಿಯ ಮೇಲಿನ ಜೀವಾವಧಿ ನಿಷೇಧವನ್ನು ಹಿಂತೆಗೆದುಕೊಂಡಿರಲಿಲ್ಲ. ಹೀಗಾಗಿ ಬಿಸಿಸಿಐ ನಿಲುವನ್ನು ಪ್ರಶ್ನಿಸಿ ಶ್ರೀಶಾಂತ್ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು.
ಬಿಸಿಸಿಐನ ಈ ಹಠಮಾರಿ ನಿಲುವು ನನ್ನ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗಿದೆ. ನನ್ನ ಮೇಲಿರುವ ಜೀವಾವಧಿ ನಿಷೇಧವನ್ನು ಪ್ರಶ್ನಿಸಿ ಶ್ರೀಶಾಂತ್ ಕೇರಳ ಹೈಕೋರ್ಟ್ ಮೊರೆಹೋಗಿದ್ದರು.
2013ರ ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ಎಸ್. ಶ್ರೀಶಾಂತ್ ಸ್ಪಾಟ್-ಪಿಕ್ಸಿಂಗ್ ನಡೆಸಿದ್ದಾರೆ ಎನ್ನುವ ಆರೋಪದಡಿ ಬಿಸಿಸಿಐ ಅವರ ಮೇಲೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಕೇರಳ ಹೈಕೋರ್ಟ್ ತೀರ್ಪನ್ನು ಸ್ವಾಗತಿಸಿರುವ ಶ್ರೀಶಾಂತ್, ದೇವರು ದೊಡ್ಡವನು. ಅಭಿಮಾನಿಗಳ ಪ್ರೀತಿ ಹಾಗೂ ಬೆಂಬಲಕ್ಕೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.