Asianet Suvarna News Asianet Suvarna News

ಸಿಡ್ನಿ ಟೆಸ್ಟ್: ಪೂಜಾರ ದ್ವಿಶತಕ ಜಸ್ಟ್ ಮಿಸ್..!

ಮೊದಲ ದಿನವೇ ಶತಕ ಸಿಡಿಸಿದ್ದ ಪೂಜಾರ ಎರಡನೇ ದಿನವೂ ಆಸಿಸ್ ಬೌಲರ್’ಗಳನ್ನು ಕಾಡಿದರು. ಒಟ್ಟು 373 ಎಸೆತಗಳನ್ನು ಎದುರಿಸಿದ ಪೂಜಾರ 22 ಬೌಂಡರಿಗಳ ನೆರವಿನಿಂದ 193 ರನ್ ಬಾರಿಸಿ ಲಯನ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

Sydney Test  Pant Slams Fifty After Pujara Dismissal
Author
Sydney NSW, First Published Jan 4, 2019, 8:48 AM IST

ಸಿಡ್ನಿ[ಜ.04]: ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ, ಸ್ಪಿನ್ನರ್ ನೇಥನ್ ಲಯನ್ ಬೌಲಿಂಗ್’ನಲ್ಲಿ ವಿಕೆಟ್ ಒಪ್ಪಿಸುವ ಮೂಲಕ ಕೇವಲ 7 ರನ್’ಗಳ ಅಂತರದಲ್ಲಿ ದ್ವಿಶತಕವಂಚಿತರಾಗಿದ್ದಾರೆ. ಇದೀಗ ಭಾರತ 130 ಓವರ್ ಮುಕ್ತಾಯದ ವೇಳೆಗೆ 6 ವಿಕೆಟ್ ಕಳೆದುಕೊಂಡು 418 ರನ್ ಬಾರಿಸಿದೆ.

ಮೊದಲ ದಿನವೇ ಶತಕ ಸಿಡಿಸಿದ್ದ ಪೂಜಾರ ಎರಡನೇ ದಿನವೂ ಆಸಿಸ್ ಬೌಲರ್’ಗಳನ್ನು ಕಾಡಿದರು. ಒಟ್ಟು 373 ಎಸೆತಗಳನ್ನು ಎದುರಿಸಿದ ಪೂಜಾರ 22 ಬೌಂಡರಿಗಳ ನೆರವಿನಿಂದ 193 ರನ್ ಬಾರಿಸಿ ಲಯನ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇದರೊಂದಿಗೆ ಪೂಜಾರ ಅಮೋಘ ಬ್ಯಾಟಿಂಗ್ ವೈಭವಕ್ಕೆ ತೆರೆಬಿದ್ದಂತಾಯಿತು.

ಈ ವಿಕೆಟ್ ಪಡೆಯುವುದರೊಂದಿಗೆ ಆಸ್ಟ್ರೇಲಿಯಾದ ನೇಥನ್ ಲಯನ್, ಶ್ರೀಲಂಕಾದ ದಿಗ್ಗಜ ಸ್ಪಿನ್ನರ್ ಮುತ್ತಯ್ಯಾ ಮುರುಳೀಧರನ್ ಬಳಿಕ ತವರಿನಲ್ಲಿ ಭಾರತ ವಿರುದ್ಧ 50+ ವಿಕೆಟ್ ಕಬಳಿಸಿದ ಸಾಧನೆ ಮಾಡಿದರು.

4 ವಿಕೆಟ್ ಕಳೆದುಕೊಂಡು 303 ರನ್’ಗಳೊಂದಿಗೆ ಎರಡನೇ ದಿನದಾಟ ಆರಂಭಿಸಿದ ಭಾರತ ಆರಂಭದಲ್ಲೇ ಹನುಮ ವಿಹಾರಿ ವಿಕೆಟ್ ಕಳೆದುಕೊಂಡಿತು. ಆ ಬಳಿಕ ರಿಷಭ್ ಪಂತ್ ಜತೆ ಇನ್ನಿಂಗ್ಸ್ ಮುಂದುವರೆಸಿದ ಪೂಜಾರ ಭಾರತವನ್ನು ನಾನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಪೂಜಾರ ವಿಕೆಟ್ ಒಪ್ಪಿಸಿದ ಬೆನ್ನಲ್ಲೇ ಪಂತ್ ಅರ್ಧಶತಕ ಪೂರೈಸಿದರು.

Follow Us:
Download App:
  • android
  • ios