ನವದೆಹಲಿ(ಮೇ.09): ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಮಹಿಳಾ ಕ್ರಿಕೆಟ್‌ ತಂಡಗಳ ನಾಯಕಿಯರು ಹಾಗೂ ಪ್ರಧಾನ ಕೋಚ್‌ಗಳಿಗೆ, ಬಿಸಿಸಿಐ ವಾರ್ಷಿಕ ಸಮಾವೇಶದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಒಂದು ದಶಕಕ್ಕೂ ಹಿಂದಿನಿಂದ ಸಮಾವೇಶ ನಡೆಸಲಾಗುತ್ತಿದ್ದು, ಮಹಿಳಾ ಕ್ರಿಕೆಟ್‌ಗೆ ಹೆಚ್ಚಿನ ಮಹತ್ವ ನೀಡುವ ಉದ್ದೇಶದಿಂದ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ. 

ಇದನ್ನೂ ಓದಿ: ವಿಶ್ವಕಪ್ 2019: 80,000 ಭಾರತೀಯರು ಇಂಗ್ಲೆಂಡ್‌ಗೆ!

ಪ್ರತಿ ವರ್ಷ ದೇಸಿ ಋುತು ಮುಕ್ತಾಯಗೊಂಡ ಬಳಿಕ ಸಮಾವೇಶ ನಡೆಸಿ, ಎಲ್ಲಾ ರಾಜ್ಯ ತಂಡಗಳಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. 2018-19ರ ಸಾಲಿನ ಸಮಾವೇಶ ಮೇ 17ರಂದು ಮುಂಬೈನಲ್ಲಿ ನಡೆಯಲಿದ್ದು, ಈ ಋುತುವಿನಲ್ಲಿ ನಡೆದ ಬೆಳವಣಿಗೆಗಳ ಕುರಿತು ಚರ್ಚೆ ನಡೆಯಲಿದೆ.

ಇದನ್ನೂ ಓದಿ: 'ಭಾರತಕ್ಕೆ ವಿಶ್ವಕಪ್ ಗೆಲ್ಲುವ ಸಾಮರ್ಥ್ಯವಿದೆ'

ಈ ಋುತುವಿನಲ್ಲಿ ಕೆಟ್ಟಅಂಪೈರಿಂಗ್‌ ಕುರಿತು ಅತಿಹೆಚ್ಚು ಚರ್ಚೆಯಾಗಿತ್ತು. ವಾರ್ಷಿಕ ಸಮಾವೇಶದಲ್ಲಿ ಅಂಪೈರಿಂಗ್‌ ಸಮಸ್ಯೆ ನಾಯಕರು ಹಾಗೂ ಕೋಚ್‌ಗಳು ಪ್ರಸ್ತಾಪಿಸುವ ನಿರೀಕ್ಷೆ ಇದೆ. 2018-19ರ ಋುತುವಿನಲ್ಲಿ ಬಿಸಿಸಿಐ ವಿವಿಧ ವಯೋಮಿತಿಯಲ್ಲಿ ಒಟ್ಟು 2024 ಪಂದ್ಯಗಳನ್ನು (ಪುರುಷ ಹಾಗೂ ಮಹಿಳಾ) ಆಯೋಜಿಸಿ ದಾಖಲೆ ಬರೆದಿತ್ತು.