ಭಾರತೀಯ ಸೇನೆಗೆ IPL ಉದ್ಘಾಟನಾ ಸಮಾರಂಭದ 20 ಕೋಟಿ !
ಐಪಿಎಲ್ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದ ಉದ್ಘಾಟನಾ ಸಮಾರಂಭ ಈ ಬಾರಿ ರದ್ದಾಗಿದೆ. ಈ ಸಮಾರಂಭ ಆಯೋಜನೆಗೆ ಇರಿಸಲಾಗಿದ್ದ 20 ಕೋಟಿ ರೂಪಾಯಿ ಹಣವನ್ನು ಭಾರತೀಯ ಸೇನೆಗೆ ನೀಡಲಿದೆ.
ಚೆನ್ನೈ(ಮಾ.23): 12ನೇ ಆವೃತ್ತಿ ಐಪಿಎಲ್ ಉದ್ಘಾಟನಾ ಸಮಾರಂಭ ರದ್ದು ಮಾಡಿರುವ ಬಿಸಿಸಿಐ ಈ ಹಣವನ್ನು ಭಾರತೀಯ ಸೇನೆಗೆ ನೀಡುವುದಾಗಿ ಘೋಷಿಸಿದೆ. ಹೀಗಾಗಿ ಬಿಸಿಸಿಐ ಸರಿಸುಮಾರು 20 ಕೋಟಿ ರೂಪಾಯಿ ಮೊತ್ತವನ್ನು ಇದೀಗ ಭಾರತೀಯ ಸೇನೆಗೆ ನೀಡಲಿದೆ.
ಇದನ್ನೂ ಓದಿ: ಐಪಿಎಲ್ ಆರಂಭಕ್ಕೂ ಮುನ್ನ ಇಲ್ಲೊಮ್ಮೆ ನೋಡಿ....
ಉದ್ಘಾಟನಾ ಸಮಾರಂಭ ಆಯೋಜನೆಯ 20 ಕೋಟಿ ರೂಪಾಯಿ ಹಣದಲ್ಲಿ 11 ಕೋಟಿ ರೂಪಾಯಿ ಭಾರತೀಯ ಸೇನೆಗೆ, ಇನ್ನು 7 ಕೋಟಿ ರೂಪಾಯಿ CRPF ಹಾಗು ತಲಾ 1 ಕೋಟಿ ಭಾರತೀಯ ವಾಯು ಸೇನೆ ಭಾರತೀಯ ನೌಕಾಪಡೆಗೆ ಹಂಚಲಿದೆ.
ಇದನ್ನೂ ಓದಿ: ಐಪಿಎಲ್ 2019: ಕಳೆದ 11 ಆವೃತ್ತಿಗಳಿಗಿಂತ 12ನೇ ಆವೃತ್ತಿ ಸ್ಪೆಷಲ್!
ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ಭಾರತೀಯ CRPF ಯೋಧರ ಮೇಲೆ ಭಯೋತ್ಪಾದಕ ದಾಳಿ ನಡೆದಿತ್ತು. ಈ ದಾಳಿಯಲ್ಲಿ 40ಕ್ಕೂ ಹೆಚ್ಚು CRPF ಯೋಧರು ಹುತಾತ್ಮರಾಗಿದ್ದರು. ಈ ದಾಳಿ ಬಳಿಕ ಬಿಸಿಸಿಐ, ಐಪಿಎಲ್ ಉದ್ಘಾಟನಾ ಸಮಾರಂಭ ರದ್ದು ಮಾಡಲು ನಿರ್ಧರಿಸಿತು.