ಐಪಿಎಲ್ 2019: ಕಳೆದ 11 ಆವೃತ್ತಿಗಳಿಗಿಂತ 12ನೇ ಆವೃತ್ತಿ ಸ್ಪೆಷಲ್!

2019ರ ಐಪಿಎಲ್ ಟೂರ್ನಿ ಕಳೆದ 11 ಆವೃತ್ತಿಗಳಿಂದ ಭಿನ್ನವಾಗಿದೆ. ಹಲವು ಅಡೆತಡೆಗಳ ನಡವೆಯೂ ವಿಶೇಷ ಟೂರ್ನಿ ಆಯೋಜಿಸುವಲ್ಲಿ ಬಿಸಿಸಿಐ ಯಶಸ್ವಿಯಾಗಿದೆ. ಈ ಬಾರಿಯ ಐಪಿಎಲ್ ಟೂರ್ನಿಯ ವಿಶೇಷತೆ ಏನು?

IPL 2019 specialty of 12 edition IPl Cricket

ಚೆನ್ನೈ(ಮಾ.22): 12ನೇ ಆವೃತ್ತಿ ಐಪಿಎಲ್ ಟೂರ್ನಿಗೆ ಮಾ.23ರಿಂದ ಆರಂಭಗೊಳ್ಳುತ್ತಿದೆ. ಮೊದಲ ಪಂದ್ಯದಲ್ಲಿ CSK vs RCB ಮುಖಾಮುಖಿಯಾಗುತ್ತಿದೆ. ಈ ಬಾರಿಯ ಐಪಿಎಲ್ ಹಲವು ವಿಶೇಷತೆಗಳನ್ನೊಳಗೊಂಡಿದೆ. ಕಳೆದ 11 ಆವೃತ್ತಿಗಳಿಗಿಂತ 12ನೇ ಆವೃತ್ತಿ ಭಿನ್ನವಾಗಿದೆ.

ಇದನ್ನೂ ಓದಿ: ದ್ರಾವಿಡ್ To ಕೊಹ್ಲಿ: ಇಲ್ಲಿದೆ RCB ಕ್ಯಾಪ್ಟನ್ ಲಿಸ್ಟ್!

ಉದ್ಘಾಟನಾ ಸಮಾರಂಭವಿಲ್ಲ:
ಕಳೆದ 11 ಆವೃತ್ತಿಗಳಲ್ಲಿ ಐಪಿಎಲ್ ಟೂರ್ನಿಯ ಉದ್ಘಾಟನಾ ಸಮಾರಂಭ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿತ್ತು.  ಬಾಲಿವುಡ್, ಹಾಲಿವುಡ್ ಸ್ಟಾರ್ ಸೆಲೆಬ್ರೆಟಿಗಳ ವರ್ಣರಂಜಿತ ಸಮಾರಂಭ ಐಪಿಎಲ್ ಟೂರ್ನಿಗೆ ಅದ್ಧೂರಿ ಆರಂಭ ನೀಡುತಿತ್ತು. ಆದರೆ ಪುಲ್ವಾಮಾ ದಾಳಿಯಿಂದ ಈ ಬಾರಿಯ ಉದ್ಘಾಟನಾ ಸಮಾರಂಭ ರದ್ದು ಮಾಡಲಾಗಿದೆ. ಈ ಹಣವನ್ನು ಹುತಾತ್ಮ ಯೋಧರ ಕುಟುಂಬಕ್ಕೆ ನೀಡಲಾಗುತ್ತೆ. ಬಿಸಿಸಿಐ ಈ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಮೂಲಕ ಈ ಬಾರಿಯ ಐಪಿಎಲ್ ವಿಶೇಷವಾಗಿದೆ. 

ಹುತಾತ್ಮ ಯೋಧರ ಕುಟುಂಬಕ್ಕೆ ಫ್ರಾಂಚೈಸಿ ನೆರವು:
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರ ಯೋಧರ ಕುಟುಂಬಕ್ಕೆ ಐಪಿಎಲ್ ಫ್ರಾಂಚೈಸಿ ನೆರವು ನೀಡಿದೆ. ಉದ್ಘಾಟನಾ ಪಂದ್ಯದ ಸಂಪೂರ್ಣ ಆದಾಯವನ್ನು ಹುತಾತ್ಮ ಯೋಧರ ಕುಟುಂಬಕ್ಕೆ ನೀಡಲು CSK ನಿರ್ಧರಿಸಿದೆ. ಇನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ಈಗಾಗಲೇ 25 ಲಕ್ಷ ರೂಪಾಯಿಗಳನ್ನು ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದೆ. 

ಇದನ್ನೂ ಓದಿ: ಐಪಿಎಲ್ 2019: ಐವರು ದುಬಾರಿ ವಿದೇಶಿ ಆಟಗಾರರ ಮೇಲೆ ಎಲ್ಲರ ಚಿತ್ತ!

ಐಪಿಎಲ್- ಲೋಕಸಭಾ ಚುನಾವಣೆ:
2008ರಲ್ಲಿ ಐಪಿಎಲ್ ಆರಂಭಗೊಂಡಿತು. ಮರುವರ್ಷವೇ ಲೋಕಸಭಾ ಚುನಾವಣೆ(2009)ಯಿಂದಾಗಿ ಸಂಪೂರ್ಣ ಐಪಿಎಲ್ ಟೂರ್ನಿ ಸೌತ್ಆಫ್ರಿಕಾಗೆ ಸ್ಥಳಾಂತರವಾಗಿತ್ತು. ಇನ್ನು 2014ರಲ್ಲೂ ಲೋಕಸಭಾ ಚುನಾವಣೆಯಿಂದ ಆರಂಭಿಕ ಹಂತದ ಪಂದ್ಯಗನ್ನು ದುಬೈನಲ್ಲಿ ಆಯೋಜಿಸಲಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಯ ನಡುವೆ ಭಾರತದಲ್ಲೇ ಸಂಪೂರ್ಣ ಐಪಿಎಲ್ ಟೂರ್ನಿ ಆಯೋಜನೆಗೊಳ್ಳುತ್ತಿದೆ.

ವಿಶೇಷ ಭದ್ರತೆ:
ಈ ಭಾರಿಯ ಐಪಿಎಲ್ ಟೂರ್ನಿಗೆ ಹಿಂದಿಗಿಂತಲೂ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಪೊಲೀಸ್, ಸೇನೆಯ ಕಣ್ಗಾವಲಿನಲ್ಲಿ ಸಂಪೂರ್ಣ ಟೂರ್ನಿ ನಡೆಯಲಿದೆ. ಆಟಗಾರರಿಗೆ ವಿಶೇಷ ಭದ್ರತೆ ನೀಡಲಾಗಿದೆ. ಮೈದಾನ, ಆಟಾಗರರು ತಂಗುವ ಹೊಟೆಲ್ ಹಾಗೂ ಕ್ರೀಡಾಂಗಣದ ಸುತ್ತಮುತ್ತ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. 

ಪಂದ್ಯ ಆಯೋಜನೆ, ಸೌಲಭ್ಯ, ವ್ಯವಸ್ಥೆ ಸೇರಿದೆಂತ ಎಲ್ಲಾ ಹೆಜ್ಜೆಯಲ್ಲೂ ಮುತುವರ್ಜಿ ವಹಿಸಲಾಗಿದೆ. ಹಲವು ಕಾರಣಗಳಿಂದ 12ನೇ ಆವೃತ್ತಿ ಐಪಿಎಲ್ ಹಿಂದಿನ ಆವೃತ್ತಿಗಳಿಗಿಂತ ವಿಶೇಷ. 

Latest Videos
Follow Us:
Download App:
  • android
  • ios