ಕಾಮೆಂಟೇಟರ್'ಗಳಿಗೂ ತಟ್ಟಿದ ಲೋಧಾ ಸಮಿತಿ ಬಿಸಿ?

sports | Tuesday, November 14th, 2017
Suvarna Web Desk
Highlights

ಗವಾಸ್ಕರ್, ಮಂಜ್ರೇಕರ್, ಹರ್ಷಾ ಬೋಗ್ಲೆ ಸೇರಿದಂತೆ ಇನ್ನೂ ಕೆಲವರು ಬಿಸಿಸಿಐನೊಂದಿಗೆ ಒಪ್ಪಂದ ಮಾಡಿಕೊಂಡಿರುವ ವೀಕ್ಷಕ ವಿವರಣೆಗಾರರಾಗಿದ್ದು, ಪತ್ರಿಕೆ, ವೆಬ್‌'ಸೈಟ್‌'ಗಳಿಗೆ ಅಂಕಣ ಸಹ ಬರೆಯುತ್ತಿದ್ದಾರೆ.

ನವದೆಹಲಿ(ನ.14): ಬಿಸಿಸಿಐನೊಂದಿಗೆ ಒಪ್ಪಂದ ಮಾಡಿಕೊಂಡಿರುವ ವೀಕ್ಷಕ ವಿವರಣೆಗಾರರಿಗೂ ಲೋಧಾ ಸಮಿತಿ ಶಿಫಾರಸಿನ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದೆ.

ಬಿಸಿಸಿಐನ ಸಿಬ್ಬಂದಿ ಬಿಸಿಸಿಐ ಹೊರತುಪಡಿಸಿ ಇನ್ಯಾವುದೇ ಮೂಲಗಳಿಂದ ಆದಾಯ ಹೊಂದಿರಬಾರದು ಎಂದು ಲೋಧಾ ಸಮಿತಿ ಸ್ಪಷ್ಟ ಪಡಿಸಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ವೀಕ್ಷಕ ವಿವರಣೆಗಾರಿಗೆ ಪತ್ರಿಕೆಗಳಲ್ಲಿ, ವೆಬ್‌'ಸೈಟ್‌'ಗಳಲ್ಲಿ ಪ್ರಾಯೋಜಿತ ಅಂಕಣ ಬರೆಯದಂತೆ ನಿರ್ಬಂಧ ಹೇರುವ ಸಾಧ್ಯತೆ ಇದೆ. ವೀಕ್ಷಕ ವಿವರಣೆಗಾರರು ಈ ರೀತಿ ಅಂಕಣ ಬರೆಯುವುದು, ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಸ್ವಹಿತಾಸಕ್ತಿ ಆಗಲಿದೆ ಎನ್ನಲಾಗಿದೆ.

ಗವಾಸ್ಕರ್, ಮಂಜ್ರೇಕರ್, ಹರ್ಷಾ ಬೋಗ್ಲೆ ಸೇರಿದಂತೆ ಇನ್ನೂ ಕೆಲವರು ಬಿಸಿಸಿಐನೊಂದಿಗೆ ಒಪ್ಪಂದ ಮಾಡಿಕೊಂಡಿರುವ ವೀಕ್ಷಕ ವಿವರಣೆಗಾರರಾಗಿದ್ದು, ಪತ್ರಿಕೆ, ವೆಬ್‌'ಸೈಟ್‌'ಗಳಿಗೆ ಅಂಕಣ ಸಹ ಬರೆಯುತ್ತಿದ್ದಾರೆ.

Comments 0
Add Comment

    Related Posts

    BCCI suspends Yusuf Pathan for five months on doping violation

    video | Tuesday, January 9th, 2018
    Suvarna Web Desk