ಮುಂಬರುವ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಕ್ರಿಕೆಟ್ ಸರಣಿಗೆ ಭಾರತ ತಂಡದ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ.

ನವದೆಹಲಿ(ಸೆ.08): ಗುವಹಾತಿ ಮತ್ತು ತಿರುವನಂತಪುರಂ ಕ್ರೀಡಾಂಗಣ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ವೇದಿಕೆಯಾಗಲಿದೆ.

ಮುಂಬರುವ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಕ್ರಿಕೆಟ್ ಸರಣಿಗೆ ಭಾರತ ತಂಡದ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ.

ಚೆನ್ನೈ, ಕೋಲ್ಕತಾ, ಇಂಧೋರ್, ಬೆಂಗಳೂರು ಮತ್ತು ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧದ 5 ಏಕದಿನ ಪಂದ್ಯಗಳನ್ನು ನಡೆಸಲಾಗುತ್ತದೆ. ಸೆ. 17, 21, 24, 28 ಮತ್ತು ಅ. 1ರಂದು ಆ ಐದು ಪಂದ್ಯಗಳು ನಡೆಯಲಿವೆ.

ಟಿ20 ಪಂದ್ಯಗಳು ಅ.7 ರಾಂಚಿ, ಅ.10 ಗುವಾಹತಿ, ಅ.13 ಹೈದ್ರಾಬಾದ್'ನಲ್ಲಿ ಆಯೋಜಿಸಲಾಗಿದೆ. ಸೆ. 12ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಧ್ಯಕ್ಷರ ಇಲೆವೆನ್ ತಂಡ ಅಭ್ಯಾಸ ಪಂದ್ಯವನ್ನಾಡಲಿದೆ.

ನ್ಯೂಜಿಲೆಂಡ್ ವಿರುದ್ಧ 3 ಏಕದಿನ, 3 ಟಿ20 ಪಂದ್ಯಗಳಲ್ಲಿ ಭಾರತ ಸೆಣಸಲಿದೆ. ಅ.22 ಮುಂಬೈನಲ್ಲಿ ಮೊದಲ ಏಕದಿನ, ಅ.25 ಪುಣೆ ಎರಡನೇ ಏಕದಿನ, ಅ.29ರಂದು ಮೂರನೇ ಏಕದಿನ ಪಂದ್ಯ ನಡೆಯಲಿದೆ.

ಟಿ20 ಪಂದ್ಯಗಳು ನ.1ರಂದು ನವದೆಹಲಿಯಲ್ಲಿ, ನ.4 ರಂದು ರಾಜ್'ಕೋಟ್'ನಲ್ಲಿ, ನ.7 ರಂದು ತಿರುವನಂತಪುರಂನಲ್ಲಿ ನಡೆಯಲಿದೆ.