Asianet Suvarna News Asianet Suvarna News

#Metoo ಆರೋಪಕ್ಕೆ ಬಿಸಿಸಿಐ ಸಿಇಓ ಮೌನ-ಗಡುವು ಮುಗಿದರು ಉತ್ತರವಿಲ್ಲ!

ಬಿಸಿಸಿಐ ಸಿಇಓ ರಾಹುಲ್ ಜೋಹ್ರಿ #Metoo ಆರೋಪಕ್ಕೆ ಗುರಿಯಾಗಿ ಇದಿಗ ವಾರಗಳೇ ಉರುಳಿದೆ. ಆರೋಪದ ಕುರಿತು 7 ದಿನಗಳ ಒಳಗೆ ಉತ್ತರಿಸಲು ಜೋಹ್ರಿ ವಿಫಲವಾಗಿದ್ದಾರೆ. ಅಷ್ಟಕ್ಕೂ ಜೋಹ್ರಿ ಈಗ ಹೇಳುತ್ತಿರೋ ಕಾರಣಗಳೇನು? ಇಲ್ಲಿದೆ

BCCI CEO Rahul Johri deadline for Metoo reply submission ends
Author
Bengaluru, First Published Oct 21, 2018, 8:00 AM IST

ನವದೆಹಲಿ(ಅ.21): ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಉತ್ತರಿಸಲು ನೀಡಿದ್ದ 7 ದಿನಗಳ ಕಾಲಾವಕಾಶ ಮುಗಿದರೂ ಬಿಸಿಸಿಐನ ಸಿಒಎ ರಾಹುಲ್‌ ಜೊಹ್ರಿ, ಈವರೆಗೂ ಉತ್ತರಿಸಿಲ್ಲ ಎನ್ನಲಾಗಿದೆ. ಈ ಸಂಬಂಧ ಆಡಳಿತ ಸಮಿತಿ(ಸಿಒಎ) ಅಥವಾ ಬಿಸಿಸಿಐನ ಆಂತರಿಕ ದೂರುಗಳ ಸಮಿತಿ ಸದಸ್ಯೆ ಕರಿನಾ ಕೃಪಲಾನಿ ಕೂಡ ಯಾವುದೇ ಮಾಹಿತಿ ನೀಡಿಲ್ಲ. 

‘ಇದು ಕಾನೂನಿಗೆ ಸಂಬಂಧಿಸಿದ ವಿಷಯವಾಗಿದ್ದರಿಂದ ಈ ಕುರಿತು ನಾನು ಹೇಳಿಕೆ ನೀಡುವುದಿಲ್ಲ ಎಂದು ಕೃಪಲಾನಿ ಹೇಳಿದ್ದಾರೆ. ಜತೆಗೆ ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ‘ಆಡಳಿತ ಸಮಿತಿ ಏಕೆ ಪಾರದರ್ಶವಾಗಿ ತನಿಖೆ ನಡೆಸುತ್ತಿಲ್ಲ. ಇದು ಗಂಭೀರ ಪ್ರಕರಣ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಕಿಡಿ ಕಾಡಿದ್ದಾರೆ.

2016ರಿಂದ ಬಿಸಿಸಿಐನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಹುಲ್‌ ಜೋಹ್ರಿ, ಅದಕ್ಕೂ ಮುನ್ನ ಡಿಸ್ಕವರಿ ವಾಹಿನಿಯ ದಕ್ಷಿಣ ಏಷ್ಯಾ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಉದ್ಯೋಗ ಕೊಡಿಸುವ ನೆಪದಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಲಾಗಿದೆ.
 

Follow Us:
Download App:
  • android
  • ios