ಭಾರತ ಹಾಗೂ ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಆಯೋಜನೆಗೆ ಕೇಂದ್ರ ಸರ್ಕಾರದ ನಿಲುವು ಸ್ಪಷ್ಟಪಡಿಸುವಂತೆ ಬಿಸಿಸಿಐ ಆಗ್ರಹಿಸಿದೆ.

ನವದೆಹಲಿ: ರಾಜಕೀಯ ಬಿಕ್ಕಟ್ಟಿನಿಂದಾಗಿ ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿ ೨೦೧೨ರಿಂದ ಸ್ಥಗಿತಗೊಂಡಿದ್ದು, ಸರಣಿ ಆಯೋಜನೆಗೆ ಬಗ್ಗೆ ನಿಲುವು ಸ್ಪಷ್ಟಪಡಿಸುವಂತೆ ಬಿಸಿಸಿಐ ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಮನವಿಮಾಡಿದೆ. ಒಪ್ಪಂದ ಮುರಿದಿರುವ ಕಾರಣ, ₹470 ಕೋಟಿ ಪರಿಹಾರಕ್ಕೆ ಐಸಿಸಿ ಬಳಿ ಅರ್ಜಿ ಸಲ್ಲಿಸಿರುವಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿರುದ್ಧವಾಗಿ ಹೋರಾಡಲು ಬಿಸಿಸಿಐ ಸಜ್ಜಾಗುತ್ತಿದ್ದು, ಐಸಿಸಿಯ ವಿವಾದ ಪರಿಹಾರ ವೇದಿಕೆ ಮುಂದೆ ಹಾಜರಾಗಲಿದೆ.ಹೀಗಾಗಿ ಮತ್ತೊಮ್ಮೆ ಕೇಂದ್ರದ ನಿಲುವು ಕೇಳಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred