Asianet Suvarna News Asianet Suvarna News

ಭಾರತ 'ಎ' ತಂಡಕ್ಕೆ ವಿಜಯ್ ಫೀಲ್ಡಿಂಗ್ ಕೋಚ್

ಭಾರತ 'ಎ' ತಂಡವು ತ್ರಿಕೋನ ಏಕದಿನ ಸರಣಿ ಹಾಗೂ ನಾಲ್ಕುದಿನಗಳ 2 ಟೆಸ್ಟ್ ಪಂದ್ಯವಾಡಲು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದೆ. ಏಕದಿನ ತಂಡವನ್ನು ಮನೀಶ್ ಪಾಂಡೆ ಮುನ್ನಡೆಸಿದರೆ, ಟೆಸ್ಟ್ ತಂಡವನ್ನು ಕರುಣ್ ನಾಯರ್ ಸಾರಥ್ಯದಲ್ಲಿ ಭಾರತ 'ಎ' ತಂಡ ಕಣಕ್ಕಿಳಿಯಲಿದೆ.

BCCI appoint Vijay Yadav as India A fielding coach

(ಜು.21): ಭಾರತ ತಂಡದ ಮಾಜಿ ವಿಕೆಟ್ ಕೀಪರ್ ವಿಜಯ್ ಯಾದವ್ ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ 'ಎ' ತಂಡದ ಫೀಲ್ಡಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.

ಯಾದವ್ ಪರ 1 ಟೆಸ್ಟ್, 19 ಏಕದಿನ ಪಂದ್ಯಗಳನ್ನು ಆಡಿದ್ದರು. ದೇಶಿ ಕ್ರಿಕೆಟ್'ನಲ್ಲಿ ಹರ್ಯಾಣ ತಂಡವನ್ನು ಪ್ರತಿನಿಧಿಸುತ್ತಿದ್ದರು.

ಭಾರತ 'ಎ' ತಂಡದ ಖಾಯಂ ಫೀಲ್ಡಿಂಗ್ ಕೋಚ್ ಅಭಯ್ ಶರ್ಮಾ ಅಂಡರ್-19 ತಂಡದೊಂದಿಗೆ ಇಂಗ್ಲೆಂಡ್'ಗೆ ತೆರಳಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಈ ನಿರ್ದಾರ ಕೈಗೊಂಡಿದೆ.

ಭಾರತ 'ಎ' ತಂಡವು ತ್ರಿಕೋನ ಏಕದಿನ ಸರಣಿ ಹಾಗೂ ನಾಲ್ಕುದಿನಗಳ 2 ಟೆಸ್ಟ್ ಪಂದ್ಯವಾಡಲು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದೆ. ಏಕದಿನ ತಂಡವನ್ನು ಮನೀಶ್ ಪಾಂಡೆ ಮುನ್ನಡೆಸಿದರೆ, ಟೆಸ್ಟ್ ತಂಡವನ್ನು ಕರುಣ್ ನಾಯರ್ ಸಾರಥ್ಯದಲ್ಲಿ ಭಾರತ 'ಎ' ತಂಡ ಕಣಕ್ಕಿಳಿಯಲಿದೆ.

Latest Videos
Follow Us:
Download App:
  • android
  • ios