ನವದೆಹಲಿ(ಸೆ.06): ದಕ್ಷಿಣ ಆಫ್ರಿಕಾ ವಿರುದ್ಧದ ತವರಿನ ಟಿ20 ಸರಣಿಗೆ ಭಾರತ ಮಹಿಳಾ ಕ್ರಿಕೆಟ್‌ ತಂಡ ಘೋಷಿಸಲಾಗಿದ್ದು, 15 ವರ್ಷದ ಶೆಫಾಲಿ ವರ್ಮಾ ಸ್ಥಾನ ಪಡೆದಿದ್ದಾರೆ. ಹರ್ಯಾಣದ ಶೆಫಾಲಿ ಐಪಿಎಲ್‌ನ ಮಹಿಳಾ ಟಿ20 ಚಾಲೆಂಜ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರಿಂದ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. 

 

ಇದನ್ನೂ ಓದಿ: IPL ಬೆಟ್ಟಿಂಗ್: ಟೀಂ ಇಂಡಿಯಾ ಮಹಿಳಾ ತಂಡದ ಮಾಜಿ ಕೋಚ್ ಅರೆಸ್ಟ್!

3 ಪಂದ್ಯ​ಗಳ ಏಕ​ದಿನ ಸರ​ಣಿಯಲ್ಲಿ ಮಿಥಾಲಿ ರಾಜ್‌ ಭಾರತ ತಂಡ​ವನ್ನು ಮುನ್ನ​ಡೆ​ಸ​ಲಿದ್ದು, ಕರ್ನಾ​ಟ​ಕದ ರಾಜೇ​ಶ್ವರಿ ಗಾಯ​ಕ್ವಾಡ್‌ ಸ್ಥಾನ ಪಡೆ​ದಿ​ದ್ದಾರೆ. 5 ಪಂದ್ಯ​ಗಳ ಟಿ20 ಸರ​ಣಿ​ಯಲ್ಲಿ ಹರ್ಮನ್‌ಪ್ರೀತ್‌ ಕೌರ್‌ ತಂಡ ಮುನ್ನ​ಡೆ​ಸ​ಲಿದ್ದು, ರಾಜ್ಯದ ವೇದಾ ಕೃಷ್ಣ​ಮೂ​ರ್ತಿಗೆ ತಂಡ​ದಲ್ಲಿ ಸ್ಥಾನ ಸಿಕ್ಕಿದೆ. ಸೆ.24ರಿಂದ ಏಕ​ದಿನ ಸರಣಿ ಆರಂಭ​ಗೊ​ಳ್ಳ​ಲಿದೆ.