ವಿಶ್ವಕಪ್ ಗೆದ್ದ ಅಂಡರ್ 19 ತಂಡಕ್ಕೆ ಬಂಪರ್ : ದ್ರಾವಿಡ್’ಗೂ ಭರ್ಜರಿ ಬಹುಮಾನ..!

BCCI announces huge prize money for Rahul Dravid U 19 team
Highlights

ಅಂಡರ್ 19 ವಿಶ್ವಕಪ್ ಪಂದ್ಯಾವಳಿಯಲ್ಲಿ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಭಾರತ ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.

ನವದೆಹಲಿ : ಅಂಡರ್ 19 ವಿಶ್ವಕಪ್ ಪಂದ್ಯಾವಳಿಯಲ್ಲಿ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಭಾರತ ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.

ಭಾರತದ ಅಂಡರ್ 19 ಕ್ರಿಕೆಟ್ ತಂಡವು ವಿಶ್ವ ಕಪ್ ಗೆಲ್ಲುತ್ತಿದ್ದಂತೆ ಬಿಸಿಸಿಐ ತಂಡಕ್ಕೆ ಭಾರಿ ಬಹುಮಾನದ ಮೊತ್ತವನ್ನು ಘೋಷಿಸಿದೆ. 

ಅಲ್ಲದೇ ಮುಖ್ಯ ಕೋಚ್ ರಾಹುಲ್ ದ್ರಾವಿಡ್’ಗೆ ಈ ಕ್ರೆಡಿಟ್ ಹೋಗುತ್ತಿದ್ದು, ಅತ್ಯುದ್ಭುತವಾದ  ಪ್ರದರ್ಶನಕ್ಕಾಗಿ 50 ಲಕ್ಷ ಹಣವನ್ನು ಅವರಿಗೆ ನೀಡಲಾಗುತ್ತಿದೆ.

ಅಲ್ಲದೇ ತಂಡದ ಪ್ರತೀ ಆಟಗಾರನಿಗೂ ಕೂಡ 30 ಲಕ್ಷ ಹಣವನ್ನು ಬಹುಮಾನವಾಗಿ ನೀಡಲಾಗುತ್ತಿದೆ. ಸಹಾಯಕ ಸಿಬ್ಬಂದಿಗೆ 20 ಲಕ್ಷ ಹಣವನ್ನು ನೀಡಲಾಗುತ್ತಿದೆ.

loader