ಬಹುಮಾನ ಮೊತ್ತವನ್ನು ಬಿಸಿಸಿಐ, ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆಗೆ ನೀಡಲಿದ್ದು, ಸಂಸ್ಥೆ ತಂಡದ ಸದಸ್ಯರಿಗೆ ಹಸ್ತಾಂತರಿಸಲಿದೆ.
ಮುಂಬೈ(ಮಾ.11): ಬದ್ಧವೈರಿ ಪಾಕಿಸ್ತಾನವನ್ನು ಕಳೆದ ತಿಂಗಳು ಬೆಂಗಳೂರಲ್ಲಿ ನಡೆದ ಫೈನಲ್‌ನಲ್ಲಿ ಮಣಿಸಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ್ದ ಭಾರತ ಅಂಧರ ತಂಡಕ್ಕೆ, 1 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಬಿಸಿಸಿಐ ಘೋಷಿಸಿದೆ.
ಫೆಬ್ರವರಿ 25ರಂದು ಇಲ್ಲಿ ನಡೆದ ಬಿಸಿಸಿಐ ಆಡಳಿತಗಾರರ ವಿಶೇಷ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಹುಮಾನ ಮೊತ್ತವನ್ನು ಬಿಸಿಸಿಐ, ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆಗೆ ನೀಡಲಿದ್ದು, ಸಂಸ್ಥೆ ತಂಡದ ಸದಸ್ಯರಿಗೆ ಹಸ್ತಾಂತರಿಸಲಿದೆ.
ಬಿಸಿಸಿಐನ ನಿರ್ಧಾರಕ್ಕೆ ಭಾರತ ತಂಡದ ನಾಯಕ ಅಜಯ್ ರೆಡ್ಡಿ ಸಂತಸ ವ್ಯಕ್ತಪಡಿಸಿದ್ದು, ಇನ್ನು ಮುಂದೆ ಆರ್ಥಿಕ ಸಮಸ್ಯೆಯ ಯೋಚನೆ ಇಲ್ಲದೆ ನಾವು ಕ್ರಿಕೆಟ್ ಆಡಬಹುದು. ಭಾರತದಲ್ಲಿ ಅಂಧರ ಕ್ರಿಕೆಟ್‌ಗೆ ಇದೇ ರೀತಿ ಹೆಚ್ಚಿನ ಪ್ರೋತ್ಸಾಹ ಸಿಗಬೇಕು ಎಂದು ಹೇಳಿದ್ದಾರೆ.
