ಟೀಂ ಇಂಡಿಯಾ ಮಹಿಳಾ ತಂಡ ಪ್ರಕಟ-ಕನ್ನಡತಿಗೆ ಒಲಿದ ನಾಯಕಿ ಪಟ್ಟ!

First Published 2, Aug 2018, 5:23 PM IST
BCCi announce squad for the senior Women t20 challenger trophy
Highlights

ಚಾಲೆಂಜರ್ ಟಿ20 ಟೂರ್ನಿಗೆ ಬಿಸಿಸಿಐ ಮಹಿಳಾ ತಂಡವನ್ನ ಆಯ್ಕೆ ಮಾಡಿದೆ. ಕರ್ನಾಟಕ ಮೂವರು ಸ್ಟಾರ್ ಆಟಗಾರರು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ವಿಶೇಷ ಅಂದರೆ  ಕನ್ನಡತಿ ವೇದಾ ಕೃಷ್ಣಮೂರ್ತಿಗೆ ನಾಯಕಿ ಪಟ್ಟ ನೀಡಲಾಗಿದೆ.

ಮುಂಬೈ(ಆ.02): ಚಾಲೆಂಜರ್ ಟಿ20 ಟ್ರೋಫಿ ಟೂರ್ನಿಗೆ ಟೀಂ ಇಂಡಿಯಾ ಮಹಿಳಾ ತಂಡಗಳನ್ನ ಪ್ರಕಟಿಸಲಾಗಿದೆ. ಆಗಸ್ಟ್ 14 ರಿಂದ 21 ರವರೆಗೆ ನಡೆಯಲಿರುವ ಈ ಟೂರ್ನಿಗೆ 3 ತಂಡಗಳನ್ನ ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿತು. 

ಬೆಂಗಳೂರು ಸಮೀಪದ ಆಲೂರಿನ ಕ್ರೀಡಾಂಗಣದಲ್ಲಿ ನಡೆಯಲಿರುವ ಚಾಲೆಂಜರ್ ಟಿ20 ಟೂರ್ನಿಯಲ್ಲಿ ಇಂಡಿಯಾ ರೆಡ್, ಇಂಡಿಯಾ ಬ್ಲೂ ಹಾಗೂ ಇಂಡಿಯಾ ಗ್ರೀನ್ ತಂಡಗಳು ಹೋರಾಟ ನಡೆಸಲಿದೆ.

ಇಂಡಿಯಾ ಗ್ರೀನ್ ತಂಡದ ನಾಯಕಿಯಾಗಿ ಕರ್ನಾಟಕ ವೇದಾ ಕೃಷ್ಣಮೂರ್ತಿ ಆಯ್ಕೆಯಾಗಿದ್ದಾರೆ. ಇಂಡಿಯಾ ಬ್ಲೂ ತಂಡಕ್ಕೆ ಮಿಥಾಲಿ ರಾಜ್ ಹಾಗೂ ಇಂಡಿಯಾ ರೆಡ್ ತಂಡಕ್ಕೆ ದೀಪ್ತಿ ಶರ್ಮಾ ನಾಯಕಿಯಾಗಿದ್ದಾರೆ. ಇನ್ನಿಬ್ಬರು ಕನ್ನಡತಿಯರಾದ ವನಿತಾ ವಿಆರ್, ಭಾರತ ಬ್ಲೂ ತಂಡ  ಹಾಗೂ ರಾಜೇಶ್ವರಿ ಗಾಯಕ್ವಾಡ್ ಭಾರತ ಗ್ರೀನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

loader