ಮೇಲ್ಬೋರ್ನ್‌[ಜ.10] ಬಿಗ್ ಬಾಶ್ ಲೀಗ್ ನಡೆಯುತ್ತಿದ್ದು ಆಸ್ಟ್ರೇಲಿಯಾದ ಆಟಗಾರರೊಬ್ಬರು ಮುಖದಿಂದ ರಕ್ತ ಸುರಿಸಿದ್ದಾರೆ. ಹಿಂದೆ ಆಸ್ಟ್ರೇಲಿಯಾದ ಫಿಲಿಫ್ ಹ್ಯೂಸ್ ವೇಗಿಯ ಬೌನ್ಸರ್‌ಗೆ ಕುಸಿದು ಬಿದ್ದು ಮೈದಾನದಲ್ಲಿಯೇ ಕೊನೆ ಉಸಿರು ಎಳೆದಿದ್ದರು.

ಬ್ರೀಸ್ಬೇನ್ ಹೀಟ್ ಮತ್ತು ಮೇಲ್ಬೋರ್ನ್ ರೆನೆಗಡ್ಸ್ ನಡುವೆ ನಡೆದ ಪಂದ್ಯದ ವೇಳೆ ಕ್ಯಾಚ್ ಪಡೆಯಲು ಹೋದ ಬೆನ್ ಕಟಿಂಗ್ ಮುಖದ ಮೇಲೆ ಚೆಂಡು ಬಿದ್ದಿದೆ.

ಈ ಸಾರಿಯ ಐಪಿಎಲ್‌ ಎಲ್ಲಿ ನಡೆಯಲಿದೆ?

ಕ್ಯಾಚ್ ತೆಗೆದುಕೊಳ್ಳಲು ಉತ್ತಮ ಪೋಜಿಶನ್‌ಗೆ ಬಂದಿದ್ದರೂ ಕಟಿಂಗ್ ಚೆಂಡು ಹಿಡಿಯಲು ವಿಫಲವಾಗಿದ್ದಾರೆ. ಮುಖಕ್ಕೆ ಬಿದ್ದ ಚೆಂಡು ರಕ್ತ ಸುರಿಸುವಂತೆ ಮಾಡಿದೆ. ಮಕ್ರೂಸ್ ಹ್ಯಾರೀಸ್ ಬೀಸಿದ ರಭಸಕ್ಕೆ ಚೆಂಡು ಗಾಳಿಯಲ್ಲಿತ್ತು. ಇದಾದ ಮೇಲೆ ಕೆಲ ಕ್ಷಣ ಪಂದ್ಯಕ್ಕೆ ಅಡ್ಡಿಯಾಗಿದೆ. ನಂತರ ಸುಧಾರಿಸಿಕೊಂಡ ಕಟಿಂಗ್‌ ಆಟಕ್ಕೆ ಇಳಿದಿದ್ದಾರೆ. ಇಂಜುರಿ ವಿಡಿಯೋ ಇಲ್ಲಿದೆ..