Asianet Suvarna News Asianet Suvarna News

ಐಸಿಸಿ ನೂತನ ಟಿ20 ರ‍್ಯಾಂಕಿಂಗ್ ಪ್ರಕಟ

ವೆಸ್ಟ್’ಇಂಡಿಸ್ ವಿರುದ್ಧ ಮೂರನೇ ಟಿ20 ಪಂದ್ಯ ಗೆದ್ದ ಬೆನ್ನಲ್ಲೇ ಬಾಂಗ್ಲಾದೇಶ ಕ್ರಿಕೆಟಿಗರ ಶ್ರೇಯಾಂಕದಲ್ಲಿ ಗಣನೀಯ ಏರಿಕೆ ಕಂಡಿದ್ದಾರೆ. ಈ ಮೊದಲು 45 ಹಾಗೂ 39ನೇ ರ‍್ಯಾಂಕಿಂಗ್’ನಲ್ಲಿದ್ದ ಶಕೀಬ್ ಅಲ್ ಹಸನ್[103 ರನ್] ಹಾಗೂ ತಮೀಮ್ ಇಕ್ಬಾಲ್[95 ರನ್] ಇದೀಗ ಕ್ರಮವಾಗಿ ಎಂಟು ಹಾಗೂ ಆರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

Bangladesh players gain from series win in latest T20I rankings
Author
Dubai - United Arab Emirates, First Published Aug 6, 2018, 8:05 PM IST

ದುಬೈ[ಆ.05]: ಏಕದಿನ ಮತ್ತು ಟೆಸ್ಟ್ ಶ್ರೇಯಾಂಕ ಪ್ರಕಟವಾದ ಬೆನ್ನಲ್ಲೇ ಐಸಿಸಿ ನೂತನ ಟಿ20 ರ‍್ಯಾಂಕಿಂಗ್ ಪ್ರಕಟಗೊಂಡಿದ್ದು ಟಾಪ್ 10 ಬ್ಯಾಟ್ಸ್’ಮನ್’ಗಳ ಪಟ್ಟಿಯಲ್ಲಿ ಇಬ್ಬರು ಟೀಂ ಇಂಡಿಯಾ ಕ್ರಿಕೆಟಿಗರು ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. ಬ್ಯಾಟಿಂಗ್’ನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್[3] ಹಾಗೂ ರೋಹಿತ್ ಶರ್ಮಾ[10] ಟಾಪ್ 10 ಪಟ್ಟಿಯಲ್ಲಿ ಸ್ಥಾನಪಡೆದಿದ್ದರೆ, ಬೌಲಿಂಗ್ ವಿಭಾಗದಲ್ಲಿ ಯುಜುವೇಂದ್ರ ಚಾಹಲ್ 4ನೇ ಶ್ರೇಯಾಂಕದಲ್ಲಿ ಭದ್ರವಾಗಿದ್ದಾರೆ.

ಇದನ್ನು ಓದಿ: ಐಸಿಸಿ ನೂತನ ಟೆಸ್ಟ್ ಶ್ರೇಯಾಂಕ ಪ್ರಕಟ..!

ವೆಸ್ಟ್’ಇಂಡಿಸ್ ವಿರುದ್ಧ ಮೂರನೇ ಟಿ20 ಪಂದ್ಯ ಗೆದ್ದ ಬೆನ್ನಲ್ಲೇ ಬಾಂಗ್ಲಾದೇಶ ಕ್ರಿಕೆಟಿಗರ ಶ್ರೇಯಾಂಕದಲ್ಲಿ ಗಣನೀಯ ಏರಿಕೆ ಕಂಡಿದ್ದಾರೆ. ಈ ಮೊದಲು 45 ಹಾಗೂ 39ನೇ ರ‍್ಯಾಂಕಿಂಗ್’ನಲ್ಲಿದ್ದ ಶಕೀಬ್ ಅಲ್ ಹಸನ್[103 ರನ್] ಹಾಗೂ ತಮೀಮ್ ಇಕ್ಬಾಲ್[95 ರನ್] ಇದೀಗ ಕ್ರಮವಾಗಿ ಎಂಟು ಹಾಗೂ ಆರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ವೆಸ್ಟ್’ಇಂಡಿಸ್ ಪರ ಅಗ್ರಸ್ಥಾನ ಕಾಯ್ದುಕೊಂಡಿದ್ದ ಸ್ಫೋಟಕ ಬ್ಯಾಟ್ಸ್’ಮನ್ ಎವಿನ್ ಲೆವಿಸ್ 7ನೇ ಸ್ಥಾನದಿಂದ 11ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಇದನ್ನು ಓದಿ: ಐಸಿಸಿ ಆಟಗಾರರ ನೂತನ ಏಕದಿನ ರ‍್ಯಾಂಕಿಂಗ್ ಪ್ರಕಟ

ಇನ್ನು ಕನ್ನಡಿಗ ಕೆ.ಎಲ್ ರಾಹುಲ್ ಮೂರನೇ ಸ್ಥಾನವನ್ನು ಉಳಿಸಿಕೊಂಡಿದ್ದರೆ, ರೋಹಿತ್ ಶರ್ಮಾ ಒಂದು ಸ್ಥಾನ ಏರಿಕೆ ಕಂಡು 10ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. 

ಹೀಗಿದೆ ಬ್ಯಾಟ್ಸ್’ಮನ್’ಗಳ ರ‍್ಯಾಂಕಿಂಗ್ :
1. ಆ್ಯರೋನ್ ಫಿಂಚ್ - Aus
2. ಫಖರ್ ಜಮಾನ್ - Pak
3. ಕೆ.ಎಲ್ ರಾಹುಲ್ - Ind
4. ಕಾಲಿನ್ ಮನ್ರೋ - NZ  
5. ಬಾಬರ್ ಅಜಂ - Pak
6. ಗ್ಲೇನ್ ಮ್ಯಾಕ್ಸ್’ವೆಲ್ - Aus
7. ಮಾರ್ಟಿನ್ ಗಪ್ಟಿಲ್ - NZ
8. ಅಲೆಕ್ಸ್ ಹೇಲ್ಸ್ - Eng
9. ಡೋರ್ಶಿ ಶಾರ್ಟ್ - Aus
10. ರೋಹಿತ್ ಶರ್ಮಾ - Ind

ಬೌಲರ್’ಗಳ ಶ್ರೇಯಾಂಕ
1. ರಶೀದ್ ಖಾನ್ - Afg
2. ಶಹದಾಬ್ ಖಾನ್ - Pak
3. ಇಶ್ ಸೋದಿ - NZ
4. ಯುಜುವೇಂದ್ರ ಚಾಹಲ್ - Ind
5. ಮಿಚೆಲ್ ಸ್ಯಾಂಟರ್ - NZ
6. ಆ್ಯಂಡ್ರೊ ಟೈ - Aus
7. ಸ್ಯಾಮುಯಲ್ ಬದ್ರಿ - WI
8. ಇಮ್ರಾನ್ ತಾಹಿರ್ - SA
9. ಆದಿಲ್ ರಶೀದ್ - Eng
10. ಮೊಹಮ್ಮದ್ ನಬೀ - Afg
 

Follow Us:
Download App:
  • android
  • ios