ಐಸಿಸಿ ಆಟಗಾರರ ನೂತನ ಏಕದಿನ ರ‍್ಯಾಂಕಿಂಗ್ ಪ್ರಕಟ

First Published 30, Jul 2018, 5:28 PM IST
Latest ICC ODIs Players Rankings Annonced
Highlights

ಐಸಿಸಿ ನೂತನ ಏಕದಿನ ಶ್ರೇಯಾಂಕ ಪ್ರಕಟಗೊಂಡಿದ್ದು, ಬ್ಯಾಟ್ಸ್’ಮನ್’ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದ್ದರೆ, ಬೌಲಿಂಗ್’ನಲ್ಲಿ ಜಸ್’ಪ್ರೀತ್ ಬುಮ್ರಾ ನಂ.1 ಸ್ಥಾನ ಉಳಿಸಿಕೊಂಡಿದ್ದಾರೆ.

ದುಬೈ[ಜು.30]: ಐಸಿಸಿ ನೂತನ ಏಕದಿನ ಶ್ರೇಯಾಂಕ ಪ್ರಕಟಗೊಂಡಿದ್ದು, ಬ್ಯಾಟ್ಸ್’ಮನ್’ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದ್ದರೆ, ಬೌಲಿಂಗ್’ನಲ್ಲಿ ಜಸ್’ಪ್ರೀತ್ ಬುಮ್ರಾ ನಂ.1 ಸ್ಥಾನ ಉಳಿಸಿಕೊಂಡಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್’ನಲ್ಲಿ ಭಾರತೀಯ ಆಟಗಾರರೇ ನಂ.1 ಸ್ಥಾನ ಉಳಿಸಿಕೊಂಡಿದ್ದಾರೆ.
ಏಕದಿನ ಕ್ರಿಕೆಟ್’ನಲ್ಲಿ 911 ರೇಟಿಂಗ್’ನೊಂದಿಗೆ ವಿರಾಟ್ ಕೊಹ್ಲಿ ನಂ.1 ಸ್ಥಾನದಲ್ಲೇ ಭದ್ರವಾಗಿದ್ದಾರೆ. ಇನ್ನು ಬಾಬರ್ ಅಜಮ್, ಜೋ ರೂಟ್ ಟಾಪ್ 3 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಪಾಕಿಸ್ತಾನದ ಫಖರ್ ಜಮಾನ್ ಎಂಟು ಸ್ಥಾನಗಳ ಜಿಗಿತ ಕಂಡು 16ನೇ ಸ್ಥಾನಕ್ಕೆ ಲಗ್ಗೆಯಿಟ್ಟರೆ, ಮತ್ತೋರ್ವ ಪಾಕ್ ಕ್ರಿಕೆಟಿಗ ಇಮಾಮ್ ಉಲ್ ಹಕ್ 121 ಸ್ಥಾನಗಳನ್ನು ಏರಿಕೆ ಕಂಡು 43ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.  

ಇನ್ನು ಬೌಲಿಂಗ್ ವಿಭಾಗದಲ್ಲಿ ಟಾಪ್ 15ರ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಬುಮ್ರಾ ಅಗ್ರಸ್ಥಾನದಲ್ಲೇ ಮುಂದುವರೆದಿದ್ದರೆ, ಕುಲ್ದೀಪ್[6], ಯುಜುವೇಂದ್ರ ಚಾಹಲ್[10] ಅಕ್ಷರ್ ಪಟೇಲ್[15] ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ.
ಬ್ಯಾಟ್ಸ್’ಮನ್’ಗಳ ಟಾಪ್ 10 ಪಟ್ಟಿ ಹೀಗಿದೆ

1. ವಿರಾಟ್ ಕೊಹ್ಲಿ - IND

2. ಬಾಬರ್ ಅಜಂ - PAK

3. ಜೋ ರೂಟ್ - ENG

4. ರೋಹಿತ್ ಶರ್ಮಾ - IND

5. ಡೇವಿಡ್ ವಾರ್ನರ್ - AUS

6. ರಾಸ್ ಟೇಲರ್ - NZ 

7. ಕ್ವಿಂಟನ್ ಡಿಕಾಕ್ - SA

8. ಫಾಪ್ ಡುಪ್ಲೆಸಿಸ್ - SA

9. ಕೇನ್ ವಿಲಿಯಮ್ಸನ್ - NZ 

10. ಶಿಖರ್ ಧವನ್ - IND

ಬೌಲರ್’ಗಳ ಟಾಪ್ 10 ಪಟ್ಟಿ ಹೀಗಿದೆ

1. ಜಸ್’ಪ್ರೀತ್ ಬುಮ್ರಾ -IND

2. ರಶೀದ್ ಖಾನ್ - AFG

3. ಹಸನ್ ಅಲಿ - PAK

4. ಟ್ರೆಂಟ್ ಬೌಲ್ಟ್ - NZ

5. ಜೋಸ್ ಹ್ಯಾಜಲ್’ವುಡ್ - AUS

6. ಕುಲ್ದೀಪ್ ಯಾದವ್ - IND

7. ಇಮ್ರಾನ್ ತಾಹೀರ್ - SA

8. ಆದಿಲ್ ರಶೀದ್ - ENG

9. ಕಗಿಸೋ ರಬಾಡ - SA

10. ಯುಜುವೇಂದ್ರ ಚಾಹಲ್ - IND
 

loader