ಇಂದಿನಿಂದ ವಿಶ್ವ ಕುಸ್ತಿ: ಭಾರತಕ್ಕೆ ಭಜರಂಗ್‌ ನೇತೃತ್ವ

2013ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದಿದ್ದ ಭಜರಂಗ್‌(65 ಕೆ.ಜಿ), ಕಾಮನ್‌ವೆಲ್ತ್‌ ಮತ್ತು ಏಷ್ಯನ್‌ ಗೇಮ್ಸ್‌ಗಳಲ್ಲಿ ಚಿನ್ನ ಗೆದ್ದಿದ್ದರು. ಗಾಯದ ಸಮಸ್ಯೆಯಿಂದಾಗಿ ತಾರಾ ಕುಸ್ತಿಪಟುಗಳಾದ ವಿನೇಶ್‌ ಫೋಗಾಟ್‌, ಸುಶೀಲ್‌ ಕುಮಾರ್‌ ಕೂಟಕ್ಕೆ ಗೈರಾಗಿದ್ದಾರೆ.

Bajrang Punia is ready to lead Indian Wrestlers in World Wrestling championship

ನವದೆಹಲಿ(ಅ.20): ಹಂಗೇರಿಯದ ಬುಡಾಪೆಸ್ಟ್‌ನಲ್ಲಿ ಇಂದಿನಿಂದ ಆರಂಭವಾಗಲಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ 30 ಸದಸ್ಯರು ಸ್ಪರ್ಧಿಸಲಿದ್ದು, ತಾರಾ ಕುಸ್ತಿಪಟು ಭಜರಂಗ್‌ ಪೂನಿಯಾ ಮೇಲೆ ನಿರೀಕ್ಷೆ ಹೆಚ್ಚಿದೆ. 

2013ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದಿದ್ದ ಭಜರಂಗ್‌(65 ಕೆ.ಜಿ), ಕಾಮನ್‌ವೆಲ್ತ್‌ ಮತ್ತು ಏಷ್ಯನ್‌ ಗೇಮ್ಸ್‌ಗಳಲ್ಲಿ ಚಿನ್ನ ಗೆದ್ದಿದ್ದರು. ಗಾಯದ ಸಮಸ್ಯೆಯಿಂದಾಗಿ ತಾರಾ ಕುಸ್ತಿಪಟುಗಳಾದ ವಿನೇಶ್‌ ಫೋಗಾಟ್‌, ಸುಶೀಲ್‌ ಕುಮಾರ್‌ ಕೂಟಕ್ಕೆ ಗೈರಾಗಿದ್ದಾರೆ. 

ಮಹಿಳಾ ವಿಭಾಗದಲ್ಲಿ ಭಾರತದ ಸವಾಲನ್ನು ಒಲಿಂಪಿಕ್ಸ್‌ ಪದಕ ವಿಜೇತೆ ಸಾಕ್ಷಿ ಮಲಿಕ್‌ ಮುನ್ನಡೆಸಲಿದ್ದಾರೆ.

Latest Videos
Follow Us:
Download App:
  • android
  • ios