ಪಿಬಿಎಲ್: ಸೆಮಿಫೈನಲ್ ಪ್ರವೇಶಿಸಿದ ಬೆಂಗಳೂರು
4ನೇ ಆವೃತ್ತಿಯ ಪ್ರೀಮಿಯರ ಬ್ಯಾಡ್ಮಿಂಟನ್ ಲೀಗ್‌ನ ಕೊನೆಯ ಪಂದ್ಯದಲ್ಲಿ ಬೆಂಗಳೂರು ರ‍್ಯಾಪ್ಟರ್ಸ್ ತಂಡ, ಚೆನ್ನೈ ಸ್ಮ್ಯಾಶರ್ಸ್ ವಿರುದ್ಧ 3-2 ರಿಂದ ಗೆಲುವು ಸಾಧಿಸಿದೆ. ಈ ಮೂಲಕ ಕೆ. ಶ್ರೀಕಾಂತ್ ನೇತೃತ್ವದ ಬೆಂಗಳೂರು ರ‍್ಯಾಪ್ಟರ್ಸ್ ಸೆಮಿಫೈನಲ್ ಹಂತಕ್ಕೇರಿದೆ.
ಬೆಂಗಳೂರು: ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ 4ನೇ ಆವೃತ್ತಿಯ ಪ್ರೀಮಿಯರ ಬ್ಯಾಡ್ಮಿಂಟನ್ ಲೀಗ್‌ನ ಕೊನೆಯ ಪಂದ್ಯದಲ್ಲಿ ಬೆಂಗಳೂರು ರ‍್ಯಾಪ್ಟರ್ಸ್ ತಂಡ, ಚೆನ್ನೈ ಸ್ಮ್ಯಾಶರ್ಸ್ ವಿರುದ್ಧ 3-2 ರಿಂದ ಗೆಲುವು ಸಾಧಿಸಿದೆ. ಈ ಮೂಲಕ ಕೆ. ಶ್ರೀಕಾಂತ್ ನೇತೃತ್ವದ ಬೆಂಗಳೂರು ರ‍್ಯಾಪ್ಟರ್ಸ್ ಸೆಮಿಫೈನಲ್ ಹಂತಕ್ಕೇರಿದೆ.
ಶುಕ್ರವಾರ ನಡೆಯಲಿರುವ ಮೊದಲ ಸೆಮೀಸ್‌ನಲ್ಲಿ ಬೆಂಗಳೂರು ತಂಡ, ಅವಧ್ ವಾರಿಯರ್ಸ್ ಎದುರು ಸೆಣಸಲಿದೆ. ಶನಿವಾರ ನಡೆಯುವ 2ನೇ ಸೆಮೀಸ್‌ನಲ್ಲಿ ಮುಂಬೈ ರಾಕೆಟ್ಸ್, ಹೈದ್ರಾಬಾದ್ ಹಂಟರ್ಸ್‌ನ್ನು ಎದುರಿಸಲಿದೆ.
ಚೆನ್ನೈ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದು, ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿ ಉಳಿಯಿತು. ಇದೀಗ ಬೆಂಗಳೂರು ಪ್ರಶಸ್ತಿಯ ಕನಸು ಮೂಡಿಸಿದೆ.