ಟಿ20 ರ‍್ಯಾಂಕಿಂಗ್‌ ಪ್ರಕಟಗೊಂಡಿದೆ. ಆದರೆ ಟಾಪ್ 10 ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಮೊದಲ ಸ್ಥಾನವನ್ನ ಪಾಕ್ ಕ್ರಿಕೆಟಿಗ ಆಕ್ರಮಿಸಿಕೊಂಡರೆ ಕನ್ನಡಿಗ ಟಾಪ್ 3 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿದೆ ಟಿ20  ರ‍್ಯಾಂಕಿಂಗ್‌

ದುಬೈ(ಅ.30): ಭಾನುವಾರ ಮುಕ್ತಾಯವಾದ ಆಸ್ಪ್ರೇಲಿಯಾ ವಿರುದ್ಧ 3 ಪಂದ್ಯಗಳ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಪಾಕಿಸ್ತಾನದ ಆಟಗಾರ ಬಾಬರ್‌ ಅಜಂ ಐಸಿಸಿ ಟಿ20 ರ‍್ಯಾಂಕಿಂಗ್‌ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

 ಆಸ್ಪ್ರೇಲಿಯಾ ವಿರುದ್ಧದ 3 ಪಂದ್ಯಗಳಲ್ಲಿ ಅಜಾಮ್‌ ಕ್ರಮವಾಗಿ 68, 45 ಮತ್ತು 50 ರನ್‌ ಗಳಿಸಿದ್ದರು. 117.26ರ ಸ್ಟ್ರೈಕ್ ರೇಟ್‌ನಲ್ಲಿ ಅಜಾಮ್‌ ಒಟ್ಟು 163 ರನ್‌ಗಳಿಸಿದ್ದರು. ಈ ಹಿಂದೆ 5ನೇ ಸ್ಥಾನದಲ್ಲಿದ್ದ ಅಜಾಮ್‌ ಮೊದಲ ಸ್ಥಾನ ಪಡೆದರೆ, ಆಸ್ಪ್ರೇಲಿಯಾದ ಆ್ಯರೋನ್‌ ಫಿಂಚ್‌ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಭಾರದ ಕೆ.ಎಲ್‌.ರಾಹುಲ್‌ 3ನೇ ಸ್ಥಾನದಲ್ಲಿದ್ದರೆ, ರೋಹಿತ್‌ ಶರ್ಮಾ 10ನೇ ಸ್ಥಾನ ಪಡೆದಿದ್ದಾರೆ.

ಐಸಿಸಿ ಟಿ20 ಬ್ಯಾಟ್ಸ್‌ಮನ್ ರ‍್ಯಾಂಕಿಂಗ್‌:

ರ‍್ಯಾಂಕ್ಬ್ಯಾಟ್ಸ್‌ಮನ್ತಂಡ
1ಬಾಬರ್ ಅಜಮ್ಪಾಕಿಸ್ತಾನ
2ಆರೋನ್ ಫಿಂಚ್ಆಸ್ಟ್ರೇಲಿಯಾ
3ಕೆಎಲ್ ರಾಹುಲ್ಭಾರತ
4ಕಾಲಿನ್ ಮುನ್ರೋನ್ಯೂಜಿಲೆಂಡ್
5ಫಕರ್ ಜಮಾನ್ಪಾಕಿಸ್ತಾನ
6ಮಾರ್ಟಿನ್ ಗಪ್ಟಿಲ್ನ್ಯೂಜಿಲೆಂಡ್
7ಗ್ಲೆನ್ ಮ್ಯಾಕ್ಸ್‌ವೆಲ್ಆಸ್ಟ್ರೇಲಿಯಾ
8ಅಲೆಕ್ಸ್ ಹೇಲ್ಸ್ಇಂಗ್ಲೆಂಡ್
9ಜೇಸನ್ ರಾಯ್ಇಂಗ್ಲೆಂಡ್
10ರೋಹಿತ್ ಶರ್ಮಾಭಾರತ