ಅವರ ಇನ್ನಿಂಗ್ಸ್ನಲ್ಲಿ 11 ಸಿಕ್ಸರ್ ಹಾಗೂ 7 ಬೌಂಡರಿಗಳು ಸೇರಿದ್ದವು. ಶೋಯಿಬ್ ಮಲಿಕ್ ನೇತೃತ್ವದ ಸ್ಯಾಫ್ ರೆಡ್ ತಂಡ 10 ಓವರ್‌ಗಳಲ್ಲಿ 201 ರನ್ ಗಳಿಸಿತ್ತು..

ಫೈಸಾಲಾಬಾದ್(ಪಾಕಿಸ್ತಾನ): ದುಬೈನಲ್ಲಿ ಇತ್ತೀಚೆಗೆ ನಡೆದ ಟಿ10(10 ಓವರ್‌ಗಳ ಪಂದ್ಯ) ಕ್ರಿಕೆಟ್ ಜಗತ್ತಿನ ಗಮನ ಸೆಳೆದಿತ್ತು. ಇದೀಗ ಟಿ10 ಕ್ರಿಕೆಟ್‌ನಲ್ಲಿ ಮೊದಲ ಶತಕ ದಾಖಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಾಹಿದ್ ಅಫ್ರಿದಿ ಪ್ರತಿಷ್ಠಾನ ಆಯೋಜಿಸಿದ್ದ ಸಹಯಾರ್ಥ ಪಂದ್ಯದಲ್ಲಿ, ಪಾಕ್‌ನ ತಾರಾ ಬ್ಯಾಟ್ಸ್‌ಮನ್ ಬಾಬರ್ ಆಜಂ ಕೇವಲ 26 ಎಸೆತಗಳಲ್ಲಿ 100 ರನ್ ಚಚ್ಚಿದರು. ಅವರ ಇನ್ನಿಂಗ್ಸ್ನಲ್ಲಿ 11 ಸಿಕ್ಸರ್ ಹಾಗೂ 7 ಬೌಂಡರಿಗಳು ಸೇರಿದ್ದವು. ಶೋಯಿಬ್ ಮಲಿಕ್ ನೇತೃತ್ವದ ಸ್ಯಾಫ್ ರೆಡ್ ತಂಡ 10 ಓವರ್‌ಗಳಲ್ಲಿ 201 ರನ್ ಗಳಿಸಿತ್ತು. ಆಜಂ ಶತಕದ ನೆರವಿನಿಂದ ಸ್ಯಾಫ್ ಗ್ರೀನ್ ತಂಡ ಭರ್ಜರಿ ಜಯ ಸಾಧಿಸಿತು..