ಪಾಕ್ ಟೆಸ್ಟ್ ತಂಡದ ನಾಯಕನಾಗಿ ಮಿಸ್ಬಾಲ್ ಉಲ್ ಹಕ್ ಅವರೇ ಮುಂದುವರೆಯಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮೂಲಗಳು ಖಚಿತಪಡಿಸಿವೆ.

ಕರಾಚಿ(ಫೆ.09): ಪಾಕಿಸ್ತಾನ ಏಕದಿನ ತಂಡದ ನೂತನ ಸಾರಥಿಯಾಗಿ ಸರ್ಫರಾಜ್ ಅಹಮದ್ ಆಯ್ಕೆಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚಿನ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಪಾಕ್ ತಂಡ ದಯನೀಯ ಪ್ರದರ್ಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಅಜರ್ ಅಲಿ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಈಗಾಗಲೇ ಟಿ20 ತಂಡದ ನಾಯಕನಾಗಿಯೂ ಕಾರ್ಯನಿರ್ವಹಿಸುತ್ತಿರುವ ವಿಕೆಟ್‌'ಕೀಪರ್ ಬ್ಯಾಟ್ಸ್‌ಮನ್ ಸರ್ಫರಾಜ್, ಇದೇ ಏಪ್ರಿಲ್ ತಿಂಗಳಿನಲ್ಲಿ ವೆಸ್ಟ್‌ಇಂಡೀಸ್ ವಿರುರದ್ಧ ನಡೆಯಲಿರುವ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

ಪ್ರಸಕ್ತ ಎಂಟನೇ ಶ್ರೇಯಾಂಕದಲ್ಲಿರುವ ಪಾಕಿಸ್ತಾನ ತಂಡವು ವಿಶ್ವಕಪ್ ಅರ್ಹತೆಗಳಿಸಿಕೊಳ್ಳಲೂ ಪರದಾಡುವ ಪರಿಸ್ಥಿತಿ ಬಂದೊದಗಿದೆ. ಆಸೀಸ್ ಎದುರು 4-1 ಅಂತರದಲ್ಲಿ ಮುಖಭಂಗ ಅನುಭವಿಸಿರುವ ಪಾಕ್ ತಂಡಕ್ಕೆ ಪಿಸಿಬಿ ಮೇಜರ್ ಸರ್ಜರಿ ಮಾಡಿದೆ.

ಅಂದಹಾಗೆ ಪಾಕ್ ಟೆಸ್ಟ್ ತಂಡದ ನಾಯಕನಾಗಿ ಮಿಸ್ಬಾಲ್ ಉಲ್ ಹಕ್ ಅವರೇ ಮುಂದುವರೆಯಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮೂಲಗಳು ಖಚಿತಪಡಿಸಿವೆ.