ಆಗಸ್ಟ್'ನಲ್ಲಿ ಇಂಗ್ಲೆಂಡ್ ಕೌಂಟಿಗೆ ಅಕ್ಷರ್ ಪಟೇಲ್

First Published 10, Apr 2018, 5:20 PM IST
Axar Patel to play for Durham in County Championship
Highlights

24 ವರ್ಷದ ಅಕ್ಷರ್ ಇದುವರೆಗೆ 38 ಏಕದಿನ ಹಾಗೂ 11 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಭಾರತ ತಂಡದಿಂದ ಹೊರಬಿದ್ದಿರುವ ವೇಗಿ ವರುಣ್ ಆ್ಯರೋನ್ ಸಹ ಕೌಂಟಿ ಕ್ರಿಕೆಟ್‌ನತ್ತ ಮುಖ ಮಾಡಿದ್ದಾರೆ.

ಲಂಡನ್: ಭಾರತದ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್, ಇದೇ ವರ್ಷ ಆಗಸ್ಟ್‌'ನಲ್ಲಿ ಕೌಂಟಿ ಕ್ರಿಕೆಟ್ ಆಡಲು ಇಂಗ್ಲೆಂಡ್‌ಗೆ ತೆರಳಲಿದ್ದಾರೆ.

ದುರ್ಹಮ್ ತಂಡದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವ ಗುಜರಾತ್ ಆಟಗಾರ, ತಂಡದ ಪರ 6 ಪ್ರಥಮ ದರ್ಜೆ ಪಂದ್ಯಗಳನ್ನು ಆಡಲಿದ್ದಾರೆ. ವಿರಾಟ್ ಕೊಹ್ಲಿ (ಸರ್ರೆ), ಚೇತೇಶ್ವರ್ ಪೂಜಾರ (ಯಾರ್ಕ್‌ಶೈರ್), ಇಶಾಂತ್ ಶರ್ಮಾ (ಸಸೆಕ್ಸ್) ಬಳಿಕ ಇಂಗ್ಲೆಂಡ್ ಕೌಂಟಿಗೆ ಈ ವರ್ಷ ತೆರಳಲಿರುವ ಭಾರತದ 4ನೇ ಆಟಗಾರ ಎನಿಸಿಕೊಂಡಿದ್ದಾರೆ.

24 ವರ್ಷದ ಅಕ್ಷರ್ ಇದುವರೆಗೆ 38 ಏಕದಿನ ಹಾಗೂ 11 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಭಾರತ ತಂಡದಿಂದ ಹೊರಬಿದ್ದಿರುವ ವೇಗಿ ವರುಣ್ ಆ್ಯರೋನ್ ಸಹ ಕೌಂಟಿ ಕ್ರಿಕೆಟ್‌ನತ್ತ ಮುಖ ಮಾಡಿದ್ದಾರೆ.

loader