Asianet Suvarna News Asianet Suvarna News

ರಾಜ್ಯದ ರೋಹನ್‌ ಬೋಪಣ್ಣ ಟೆನಿಸ್‌ ಡಬಲ್ಸ್‌ನಲ್ಲಿ ವಿಶ್ವ ನಂಬರ್‌ 1..! ಶುಭ ಹಾರೈಸಿದ ಸಾನಿಯಾ ಮಿರ್ಜಾ

43 ವರ್ಷದ ಬೋಪಣ್ಣ ವಿಶ್ವ ನಂ.3ನೇ ಸ್ಥಾನಿಯಾಗಿ ಟೂರ್ನಿಗೆ ಕಾಲಿರಿಸಿದ್ದರು. ಬುಧವಾರ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೊತೆಗೂಡಿ ಅಂತಿಮ 4ರ ಘಟ್ಟಕ್ಕೆ ಪ್ರವೇಶಿಸುವುದರೊಂದಿಗೆ ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ್ದಾರೆ. ಸೋಮವಾರ ಪ್ರಕಟಗೊಳ್ಳುವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಅವರು ಅಧಿಕೃತವಾಗಿ ನಂ.1 ಸ್ಥಾನಿಯಾಗಲಿದ್ದಾರೆ.

Tennis Legend Rohan Bopanna becomes oldest No 1 at 43 kvn
Author
First Published Jan 25, 2024, 12:09 PM IST

ಮೆಲ್ಬರ್ನ್(ಜ.25): ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿರುವ ಭಾರತದ ಹಿರಿಯ ಟೆನಿಸಿಗ, ಕರ್ನಾಟಕದ ರೋಹನ್‌ ಬೋಪಣ್ಣ ಪುರುಷರ ಡಬಲ್ಸ್‌ ರ್‍ಯಾಂಕಿಂಗ್‌ನಲ್ಲಿ ವಿಶ್ವ ನಂ.1 ಸ್ಥಾನ ಖಚಿತಪಡಿಸಿಕೊಂಡಿದ್ದಾರೆ. ಇದರೊಂದಿಗೆ ಪುರುಷರ ಡಬಲ್ಸ್‌ನಲ್ಲಿ ಅಗ್ರಸ್ಥಾನಕ್ಕೇರಿದ ಹಿರಿಯ ಟೆನಿಸಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಮೊದಲು 2022ರಲ್ಲಿ ಅಮೆರಿಕದ ರಾಜೀವ್‌ ರಾಮ್‌ ತಮಗೆ 38 ವರ್ಷವಾಗಿದ್ದಾಗ ನಂ.1 ಸ್ಥಾನಕ್ಕೇರಿದ್ದರು.

43 ವರ್ಷದ ಬೋಪಣ್ಣ ವಿಶ್ವ ನಂ.3ನೇ ಸ್ಥಾನಿಯಾಗಿ ಟೂರ್ನಿಗೆ ಕಾಲಿರಿಸಿದ್ದರು. ಬುಧವಾರ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೊತೆಗೂಡಿ ಅಂತಿಮ 4ರ ಘಟ್ಟಕ್ಕೆ ಪ್ರವೇಶಿಸುವುದರೊಂದಿಗೆ ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ್ದಾರೆ. ಸೋಮವಾರ ಪ್ರಕಟಗೊಳ್ಳುವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಅವರು ಅಧಿಕೃತವಾಗಿ ನಂ.1 ಸ್ಥಾನಿಯಾಗಲಿದ್ದಾರೆ.

ಕ್ವಾರ್ಟರ್‌ನಲ್ಲಿ ಅರ್ಜೆಂಟೀನಾದ ಮ್ಯಾಕ್ಸಿಮೊ ಗೊಂಜಾಲೆಜ್‌-ಆ್ಯಂಡ್ರೆಸ್‌ ಮೊಲ್ಟೆನಿ ವಿರುದ್ಧ 6-4, 7-6(7/5)ರಲ್ಲಿ ಗೆದ್ದಿರುವ ಇಂಡೋ-ಆಸೀಸ್‌ ಜೋಡಿ, ಸೆಮೀಸ್‌ನಲ್ಲಿ ಚೀನಾದ ಝಾಂಗ್‌-ಚೆಕ್‌ ಗಣರಾಜ್ಯದ ಥಾಮಸ್‌ ಮಚಾಕ್‌ ವಿರುದ್ಧ ಸೆಣಸಲಿದೆ.

ನಂ.1 ಸ್ಥಾನಕ್ಕೇರಿದ ನಾಲ್ಕನೇ ಭಾರತೀಯ

ಬೋಪಣ್ಣ ಡಬಲ್ಸ್‌ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಲಿರುವ ಭಾರತದ 4ನೇ ಟೆನಿಸಿಗ. ಈ ಮೊದಲು ಲಿಯಾಂಡರ್‌ ಪೇಸ್‌(1999), ಸಾನಿಯಾ ಮಿರ್ಜಾ(2015) ಹಾಗೂ ಮಹೇಶ್‌ ಭೂಪತಿ(1999) ಡಬಲ್ಸ್‌ನಲ್ಲಿ ನಂ.1 ಸ್ಥಾನಿಯಾಗಿದ್ದರು.

ಶುಭ ಹಾರೈಸಿದ ಸಾನಿಯಾ ಮಿರ್ಜಾ: ಇನ್ನು ಇತ್ತೀಚೆಗಷ್ಟೇ ವೈಯುಕ್ತಿಕ ಕಾರಣದಿಂದ ಸುದ್ದಿಯಲ್ಲಿರುವ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಟೆನಿಸ್ ದಂತಕಥೆ ರೋಹನ್ ಬೋಪಣ್ಣ ಅವರ ಸಾಧನೆಗೆ ಶುಭ ಹಾರೈಸಿದ್ದಾರೆ. ತುಂಬಾ ಹೆಮ್ಮೆ ಎನಿಸುತ್ತಿದೆ ರೋಹನ್ ಬೋಪಣ್ಣ. ನಿಮಗಿಂತ ಅರ್ಹರಾದ ವ್ಯಕ್ತಿ ಮತ್ತೊಬ್ಬರಿಲ್ಲ ಎಂದು ಸಾನಿಯಾ ಟ್ವೀಟ್ ಮಾಡಿ ಶುಭಹಾರೈಸಿದ್ದಾರೆ. 

ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಆಲ್ಕರಜ್‌ ಸವಾಲು ಅಂತ್ಯ!

ಮೆಲ್ಬರ್ನ್‌: ಟೆನಿಸ್‌ ಲೋಕದ ಯುವ ತಾರೆ, ಹಾಲಿ ವಿಂಬಲ್ಡನ್‌ ಚಾಂಪಿಯನ್‌ ಕಾರ್ಲೊಸ್‌ ಆಲ್ಕರಜ್‌ರ ಚೊಚ್ಚಲ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಂ ಗೆಲ್ಲುವ ಕನಸು ಭಗ್ನಗೊಂಡಿದೆ.

ಬುಧವಾರ ವಿಶ್ವ ನಂ.2, ಸ್ಪೇನ್‌ನ 19ರ ಆಲ್ಕರಜ್‌ ವಿರುದ್ಧ ಕ್ವಾರ್ಟರ್‌ ಫೈನಲ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ವಿರುದ್ಧ 6-1, 6-3, 6-7 (2), 6-4 ಅಂತರದಲ್ಲಿ ಗೆಲುವು ಸಾಧಿಸಿದರು. 6ನೇ ಶ್ರೇಯಾಂಕಿತ ಜ್ವೆರೆವ್‌ 2020ರ ಬಳಿಕ ಮತ್ತೊಮ್ಮೆ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಸೆಮೀಸ್‌ಗೇರಿದ್ದು, ಚೊಚ್ಚಲ ಪ್ರಶಸ್ತಿ ನಿರೀಕ್ಷೆಯಲ್ಲಿದ್ದಾರೆ.

ಮತ್ತೊಂದು ಕ್ವಾರ್ಟರ್‌ನಲ್ಲಿ 2 ಬಾರಿ ರನ್ನರ್‌-ಅಪ್‌, ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ಅವರು 9ನೇ ಶ್ರೇಯಾಂಕಿತ ಪೋಲೆಂಡನ್‌ನ ಹ್ಯೂಬರ್ಟ್‌ ಹರ್ಕಜ್‌ರನ್ನು 7-6(4), 2-6, 6-3, 5-7, 6-4 ಸೆಟ್‌ಗಳಲ್ಲಿ ರೋಚಕವಾಗಿ ಮಣಿಸಿ, 3ನೇ ಬಾರಿ ಟೂರ್ನಿಯಲ್ಲಿ ಸೆಮಿಫೈನಲ್‌ಗೇರಿದರು.

ಝೆಂಗ್‌, ಡಯಾನ ಸೆಮಿಫೈನಲ್‌ಗೆ

ಮಹಿಳಾ ಸಿಂಗಲ್ಸ್‌ನಲ್ಲಿ 12ನೇ ಶ್ರೇಯಾಂಕಿತೆ, ಚೀನಾದ ಕ್ವಿನ್‌ವೆನ್‌ ಝೆಂಗ್ ಅವರು ರಷ್ಯಾದ ಅನ್ನಾ ಕಲಿನ್ಸ್‌ಕಯಾ ವಿರುದ್ಧ ಗೆದ್ದು ಚೊಚ್ಚಲ ಬಾರಿ ಗ್ರ್ಯಾನ್‌ಸ್ಲಾಂ ಸೆಮಿಫೈನಲ್‌ ಪ್ರವೇಶಿಸಿದರು. ಉಕ್ರೇನ್‌ನ ಶ್ರೇಯಾಂಕ ರಹಿತೆ ಡಯಾನ ಯಾಸ್ಟ್ರೆಮಸ್ಕ ಅವರು ಚೆಕ್‌ ಗಣರಾಜ್ಯದ ಲಿಂಡಾ ನೊಸ್ಕೋವಾ ಅವರನ್ನು ಸೋಲಿಸಿ ಅಂತಿಮ 4 ಘಟ್ಟ ಪ್ರವೇಶಿಸಿದರು.
 

Follow Us:
Download App:
  • android
  • ios